ನೆಹರುನಗರ : ಡ್ರಗ್ಸ್ ಹೊಂದಿದ್ದ ಕಾಸರಗೋಡು ನಿವಾಸಿ ಬಂಟ್ವಾಳ ನಗರ ಪೊಲೀಸರ ಬಲೆಗೆ - Karavali Times ನೆಹರುನಗರ : ಡ್ರಗ್ಸ್ ಹೊಂದಿದ್ದ ಕಾಸರಗೋಡು ನಿವಾಸಿ ಬಂಟ್ವಾಳ ನಗರ ಪೊಲೀಸರ ಬಲೆಗೆ - Karavali Times

728x90

13 December 2025

ನೆಹರುನಗರ : ಡ್ರಗ್ಸ್ ಹೊಂದಿದ್ದ ಕಾಸರಗೋಡು ನಿವಾಸಿ ಬಂಟ್ವಾಳ ನಗರ ಪೊಲೀಸರ ಬಲೆಗೆ

ಬಂಟ್ವಾಳ, ಡಿಸೆಂಬರ್ 12, 2025 (ಕರಾವಳಿ ಟೈಮ್ಸ್) : ನರಿಕೊಂಬು ಗ್ರಾಮದ ನೆಹರುನಗರ ಎಂಬಲ್ಲಿ ಡ್ರಗ್ಸ್ ಜೊತೆ ಕೇರಳ ಮೂಲದ ವ್ಯಕ್ತಿಯೋರ್ವನನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ ಘಟನೆ ಡಿ 12 ರಂದು ಸಂಜೆ ನಡೆದಿದೆ. 

ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ಕಾಸರಗೋಡು ನಿವಾಸಿ ಅಬ್ದುಲ್ ನಾಸೀರ್ (28) ಎಂದು ಹೆಸರಿಸಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಸ್ಸೈ ಸಂದೀಪ್ ಕುಮಾರ್ ಶೆಟ್ಟಿ ಅವರು ಸಿಬ್ಬಂದಿಗಳ ಜೊತೆ ಡಿ 12 ರಂದು ಸಂಜೆ 6 ಗಂಟೆ ವೇಳೆಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಂದರ್ಭ ನರಿಕೊಂಬು ಗ್ರಾಮದ ನೆಹರೂನಗರ ಅಂಡರ್ ಪಾಸ್ ಬಳಿ ಆರೋಪಿ ನಿಂತುಕೊಂಡಿದ್ದು, ಆತನನ್ನು ವಿಚಾರಿಸಿದಾಗ ಆತನಲ್ಲಿ ಮೆಥ್ ಡ್ರಗ್ಸ್ ಇರುವುದು ಬೆಳಕಿಗೆ ಬಂದಿದೆ. 

ಆತ ಡ್ರಗ್ಸ್ ಸೇವಿಸಲು ಜನ ವಿರಳ ಇರುವ ಸ್ಥಳಕ್ಕೆ ಬಂದಿರುವುದಾಗಿ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾನೆ. ಆತನಲ್ಲಿ ಒಟ್ಟು 1 ಸಾವಿರ ರೂಪಾಯಿ ಮೌಲ್ಯದ 1020 ಮಿಲಿ ಗ್ರಾಂ ಡ್ರಗ್ಸ್ ಪತ್ತೆಯಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ನೆಹರುನಗರ : ಡ್ರಗ್ಸ್ ಹೊಂದಿದ್ದ ಕಾಸರಗೋಡು ನಿವಾಸಿ ಬಂಟ್ವಾಳ ನಗರ ಪೊಲೀಸರ ಬಲೆಗೆ Rating: 5 Reviewed By: karavali Times
Scroll to Top