ಬಂಟ್ವಾಳ, ಡಿಸೆಂಬರ್ 27, 2025 (ಕರಾವಳಿ ಟೈಮ್ಸ್) : ಕಾರು ಡಿಕ್ಕಿ ಹೊಡೆದು ಅಟೋ ರಿಕ್ಷಾ ಮಗುಚಿ ಬಿದ್ದ ಪರಿಣಾಮ ಚಾಲಕ ಹಾಗೂ ಸಹ ಪ್ರಯಾಣಿಕ ಗಾಯಗೊಂಡ ಘಟನೆ ವಿಟ್ಲ ಕಸಬಾ ಗ್ರಾಮದ ನಾಲ್ಕು ಮಾರ್ಗ ಜಂಕ್ಷನ್ ಎಂಬಲ್ಲಿ ಡಿ 25 ರಂದು ಸಂಭವಿಸಿದೆ.
ಗಾಯಗೊಂಡ ಅಟೋ ರಿಕ್ಷಾ ಚಾಲಕನನ್ನು ವಿಟ್ಲ ಕಸಬಾ ಗ್ರಾಮದ ಪೂಜಪಾಡಿ ನಿವಾಸಿ ಲಕ್ಷ್ಮೀಶ (23) ಹಾಗೂ ಸಹಪ್ರಯಾಣಿಕ ಬಾಲಂದು ಕುಮಾರ್ ಎಂದು ಹೆಸರಿಸಲಾಗಿದೆ.
ಲಕ್ಷ್ಮೀಶ ಅವರು ಬಾಲಂದು ಕುಮಾರ್ ಅವರನ್ನು ಸಹಪ್ರಯಾಣಿಕನಾಗಿ ಕುಳ್ಳಿರಿಸಿಕೊಂಡು ಸಂಚರಿಸುತ್ತಿದ್ದ ವೇಳೆ ಸಾಲೆತ್ತೂರು ಕಡೆಯಿಂದ ಮಹಮ್ಮದ್ ಇಫ್ರಾಹ್ ಎಂಬವರು ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಅಟೋ ರಿಕ್ಷಾ ಮಗುಚಿ ಬಿದ್ದು ಇಬ್ಬರೂ ಗಾಯಗೊಂಡಿದ್ದಾರೆ. ಈ ಸಂದರ್ಭ ಅಲ್ಲೇ ಇದ್ದ ಯೋಗೀಶ ಹಾಗೂ ಸಂಕೇತ ಎಂಬವರು ಗಾಯಾಳುಗಳನ್ನು ರಿಕ್ಷಾದಿಂದ ಹೊರಗೆಳೆದು ವಿಟ್ಲ ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















0 comments:
Post a Comment