ಬಂಟ್ವಾಳ, ಡಿಸೆಂಬರ್ 13, 2025 (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ಯುನಿಟ್ ದಶಮಾನೋತ್ಸವದ ಪ್ರಯುಕ್ತ ಆಧ್ಯಾತ್ಮಿಕ ಇಶ್ಕೇ ಮಜ್ಲಿಸ್ ಕಾರ್ಯಕ್ರಮ ಹಾಗೂ ಸಮಸ್ತ ಶತಮಾನೋತ್ಸವ ಪ್ರಚಾರ ಮಹಾ ಸಮ್ಮೇಳನವು ಡಿಸೆಂಬರ್ 14 ರಂದು ಭಾನುವಾರ ಸಂಜೆ 4 ಗಂಟೆಗೆ ಕೆಳಗಿನಪೇಟೆ ಬದ್ರಿಯಾ ಜುಮಾ ಮಸೀದಿ ಹತ್ತಿರದ ಮೈದಾನದಲ್ಲಿ ನಡೆಯಲಿದೆ.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಉಸ್ಮಾನುಲ್ ಫೈಝಿ ತೋಡಾರು ಸಮ್ಮೇಳನ ಉದ್ಘಾಟಿಸುವರು. ದ ಕ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್-ಅಝ್ಹರಿ ಉದ್ಘಾಟಿಸುವರು. ಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ವೆಸ್ಟ್ ಅಧ್ಯಕ್ಷ ಸಯ್ಯಿದ್ ಅಮೀರ್ ತಂಙಳ್ ಕಿನ್ಯ ದುವಾ ನೆರವೇರಿಸುವರು.
ಕೇರಳದ ಅನ್ವರ್ ಅಲಿ ಹುದವಿ ಅವರು ಮಗ್ರಿಬ್ ಬಳಿಕ ನಡೆಯುವ ಇಶ್ಕೇ ಮಜ್ಲಿಸ್ ಆಧ್ಯಾತ್ಮಿಕ ಸಂಗಮದ ನೇತೃತ್ವ ವಹಿಸುವರು. ಸತ್ತಾರ್ ಪಂದಲ್ಲೂರು ಮುಖ್ಯ ಭಾಷಣಗೈಯುವರು. ಬಂಟ್ವಾಳ ಜುಮಾ ಮಸೀದಿ ಮುದರ್ರಿಸ್ ಅಬ್ದುಲ್ ಸಲಾಂ ಯಮಾನಿ, ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಇರ್ಶಾದ್ ದಾರಿಮಿ ಅಲ್-ಜಝರಿ, ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ರಫೀಕ್ ಹುದವಿ ಕೋಲಾರಿ ಅವರುಗಳು ಪ್ರಾಸ್ತಾವಿಕ ಭಾಷಣಗೈಯುವರು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸುವರು ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಮಾಸ್ಟರ್ ತಿಳಿಸಿದ್ದಾರೆ.














0 comments:
Post a Comment