ಬಂಟ್ವಾಳ, ಡಿಸೆಂಬರ್ 12, 2025 (ಕರಾವಳಿ ಟೈಮ್ಸ್) : ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದ ವ್ಯಕ್ತಿಯೋರ್ವ ಅಡುಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಿಲಿಮೊಗರು ಗ್ರಾಮದ ಸುಣ್ಣಡಪೋಳಿ ಎಂಬಲ್ಲಿ ಡಿ 12 ರಂದು ನಡೆದಿದೆ.
ಮೃತರನ್ನು ಶೇಖರ್ ಶೆಟ್ಟಿ (53) ಎಂದು ಹೆಸರಿಸಲಾಗಿದೆ. ಇವರು ಕಳೆದ 10 ವರ್ಷಗಳಿಂದ ವಿಪರಿತ ಮದ್ಯ ಸೇವಿಸುವ ಚಟ ಹೊಂದಿದ್ದು, ಜೀವನದಲ್ಲಿ ಜಿಗುಪ್ಸೆ ಹೊಂದಿ ಡಿ 12 ರಂದು ಅವರ ತಾಯಿಯ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರ ಪತ್ನಿ ಉಡುಪಿ ಜಿಲ್ಲೆಯ ಮಣಿಪುರ-ಕುಂಟಾಲನಗರ, ಮೂಡಬೈಲು ನಿವಾಸಿ ವಿನೀತಾ ಶೆಟ್ಟಿ (48) ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯು ಡಿ ಆರ್ ಪ್ರಕರಣ ದಾಖಲಾಗಿದೆ.














0 comments:
Post a Comment