ಮಂಗಳೂರು, ಡಿಸೆಂಬರ್ 11, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಸಮಿತಿಯ ಡಿಸೆಂಬರ್ ತಿಂಗಳ ಮಾಸಿಕ ಸಭೆಯು ನಗರದ ಮಲ್ಲಿಕಟ್ಟೆಯ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಘಟಕದ ಜಿಲ್ಲಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಮಾತನಾಡಿ, ಅಸಂಘಟಿತ ಕಾರ್ಮಿಕರನ್ನು ಗುರುತಿಸಿ ಅವರ ಮನೆಗೆ ತೆರಳಿ ಸಂಬಂಧಪಟ್ಟ ಮಾಹಿತಿ ಮತ್ತು ಸವಲತ್ತನ್ನು ಮುಟ್ಟಿಸುವ ಮೂಲಕ ಪರಸ್ಪರ ಸಹಕಾರಿಗಳಾಗೋಣ ಎಂದರು.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಲು ನಾವು ಈಗಿನಿಂದಲೇ ತಯಾರಾಗಬೇಕು ಎಂದವರು ಕರೆ ನೀಡಿದರು.
ಸಭೆಯಲ್ಲಿದ್ದ ಜಿಲ್ಲಾ ಅಸಂಘಟಿತ ಪದಾಧಿಕಾರಿಗಳು ಮತ್ತು ಬ್ಲಾಕ್ ಅಧ್ಯಕ್ಷರುಗಳು ಮಾತನಾಡಿ, ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಬಗ್ಗೆ ಮತ್ತು ಬ್ಲಾಕ್ ಮಟ್ಟದಲ್ಲಿ ಆಗಬೇಕಾದ ಕಾರ್ಯಕ್ರಮಗಳ ಬಗ್ಗೆ ಪ್ರತಿಯೊಬ್ಬರೂ ಮಾಹಿತಿ ನೀಡಿದರು. ಮತ್ತು ಪ್ರತೀ ಬ್ಲಾಕ್ ಮಟ್ಟದಲ್ಲಿ 17 ಜನರ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಯಿತು. ಇದೇ ವೇಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕಡಬ ಬ್ಲಾಕ್ ಅಸಂಘಟಿತ ಸಮಿತಿ ಅಧ್ಯಕ್ಷ ಸುದರ್ಶನ ನಾಯಕ್ ಕಂಪ ಅವರನ್ನು ಸನ್ಮಾನಿಸಲಾಯಿತು.
ವಿವಿಧ ಅಸಂಘಟಿತ ಬ್ಲಾಕ್ ಸಮಿತಿ ಅಧ್ಯಕ್ಷರುಗಳು ಮತ್ತು ಜಿಲ್ಲಾ ಅಸಂಘಟಿತ ಪದಾಧಿಕಾರಿಗಳಾದ ಜ್ಞಾನಶೀಲಂ, ಶ್ರೀಮತಿ ಜೆಸಿಂತಾ ಮೆಂಡೊನ್ಸಾ, ಅಬ್ದುಲ್ ರಜಾಕ್, ಇಲ್ಯಾಸ್, ಬಿ ಕೆ ಜಾನ್ಸನ್, ಮಂಜುನಾಥ್ ಸುಳ್ಯ, ಯೋಗೀಶ್, ಹರ್ಷದ್ ಕುಕ್ಕಿಲ, ಬಶೀರ್ ಆತೂರು, ರವಿರಾಜ್ ಆಳ್ವ, ಪ್ರಶಾಂತ್ ಅಮೀನ್, ದಿನೇಶ್ ಶೆಟ್ಟಿ, ತುಕಾರಾಂ ಗೌಡ, ಸಂತೋಷ್ ದೇವಾಡಿಗ, ಸೇಸಪ್ಪ ನೆಕ್ಕಿಲ, ಸಂದೀಪ್ ಮ್ಯಾಕ್ಸಿಂ, ಶಿವಕುಮಾರ, ರಕ್ಷಿತ, ಅಬೂಬಕ್ಕರ್ ಜೋಕಟ್ಟೆ, ಪ್ರಮುಖರಾದ ಚಂದ್ರನ್, ಸುರೇಶ್ ಕುಮಾರ್, ಶರವಣನ್, ಅರುಣಾಚಲಂ ಮೊದಲಾದವರು ಭಾಗವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಿರಂಜನ್ ರೈ ಸ್ವಾಗತಿಸಿ, ದಿನೇಶ್ ಶೆಟ್ಟಿ ವಂದಿಸಿದರು.

















0 comments:
Post a Comment