ಕಕ್ಕೆಪದವು : ಅಣ್ಣನ ಜಮೀನಿಗೆ ನುಗ್ಗಿ ಅಡಿಕೆ ಗಿಡ ನಾಶ ಮಾಡಿ ಜೀವ ಬೆದರಿಕೆ ಒಡ್ಡಿ ತಂಗಿ ಹಾಗೂ ಮಕ್ಕಳು - Karavali Times ಕಕ್ಕೆಪದವು : ಅಣ್ಣನ ಜಮೀನಿಗೆ ನುಗ್ಗಿ ಅಡಿಕೆ ಗಿಡ ನಾಶ ಮಾಡಿ ಜೀವ ಬೆದರಿಕೆ ಒಡ್ಡಿ ತಂಗಿ ಹಾಗೂ ಮಕ್ಕಳು - Karavali Times

728x90

11 December 2025

ಕಕ್ಕೆಪದವು : ಅಣ್ಣನ ಜಮೀನಿಗೆ ನುಗ್ಗಿ ಅಡಿಕೆ ಗಿಡ ನಾಶ ಮಾಡಿ ಜೀವ ಬೆದರಿಕೆ ಒಡ್ಡಿ ತಂಗಿ ಹಾಗೂ ಮಕ್ಕಳು

ಬಂಟ್ವಾಳ, ಡಿಸೆಂಬರ್ 11, 2025 (ಕರಾವಳಿ ಟೈಮ್ಸ್) : ಅಣ್ಣನ ಜಮೀನಿಗೆ ತಂಗಿ ಹಾಗೂ ಮಕ್ಕಳು ಅಕ್ರಮ ಪ್ರವೇಶಗೈದು ಅಡಿಕೆ ಗಿಡಗಳನ್ನು ನಾಶಪಡಿಸಿದ್ದಲ್ಲದೆ ಮಾಲಕಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ ಘಟನೆ ಉಳಿ ಗ್ರಾಮದ ಕಕ್ಕೆಪದವು ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ಬಗ್ಗೆ ಕಕ್ಕೆಪದವು ನಿವಾಸಿ ಕೊರಗಪ್ಪ ನಾಯ್ಕ (55) ಅವರು ಪೊಲೀಸರಿಗೆ ದೂರು ನೀಡಿದ್ದು, ಉಳಿ ಗ್ರಾಮದ ಕಕ್ಕೆಪದವು ಎಂಬಲ್ಲಿರುವ ಇವರ ಜಮೀನಿನಲ್ಲಿ ಅಡಿಕೆ ಗಿಡ ನೆಟ್ಟಿದ್ದು, ಡಿ 5 ರಂದು ರಾತ್ರಿ ಅಡಿಕೆ ಗಿಡಗಳನ್ನು ತಂಗಿ ರಾಧ ನಾಯ್ಕ ಮತ್ತು ಮಕ್ಕಳಾದ ಸುರೇಶ ನಾಯ್ಕ, ಸಂದೇಶ ನಾಯ್ಕ ಅಡಿಕೆ ಗಿಡಗಳನ್ನು ಕಡಿದ ಬಗ್ಗೆ ಡಿ 6 ರಂದು ಬೆಳಿಗ್ಗೆ 7 ಗಂಟೆಗೆ ನೋಡಿರುತ್ತಾರೆ. ಆರೋಪಿಗಳು ನಿರಂತರವಾಗಿ ಸದ್ರಿ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಸುಮಾರು 37 ಅಡಿಕೆ ಗಿಡಗಳನ್ನು ಕಡಿದಿದ್ದಲ್ಲದೆ ಅವ್ಯಾಚ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕಕ್ಕೆಪದವು : ಅಣ್ಣನ ಜಮೀನಿಗೆ ನುಗ್ಗಿ ಅಡಿಕೆ ಗಿಡ ನಾಶ ಮಾಡಿ ಜೀವ ಬೆದರಿಕೆ ಒಡ್ಡಿ ತಂಗಿ ಹಾಗೂ ಮಕ್ಕಳು Rating: 5 Reviewed By: karavali Times
Scroll to Top