ಮಂಗಳೂರು, ಡಿಸೆಂಬರ್ 08, 2025 (ಕರಾವಳಿ ಟೈಮ್ಸ್) : 2024ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವಿದೇಶದಲ್ಲಿ ಕುಳಿತು ಅವಹೇಳಕಾರಿ ಪೆÇೀಸ್ಟ್ ಹರಿಯಬಿಟ್ಟಿದ್ದ ಆರೋಪಿಯನ್ನು ಮುಂಬಯಿ ವಿಮಾನ ನಿಲ್ದಾಣದಿಂದ ಬಂಧಿಸಿ ಮಂಗಳೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಬಂಧಿತ ಆರೋಪಿಯನ್ನು ಮುಂಬಯಿ ಮೂಲದ ಫೆಲಿಕ್ಸ್ ಎಡ್ವರ್ಡ್ ಮಥಾಯಸ್ (56) ಎಂದು ಹೆಸರಿಸಲಾಗಿದೆ. 2024ನೇ ಸಾಲಿನ ಫೆಬ್ರವರಿ ತಿಂಗಳಿನಲ್ಲಿ ಭಗವದ್ಗೀತೆ ಮತ್ತು ಮಹಿಳೆಯರ ಬಗ್ಗೆ ಅವಹೇಳನಕಾರಿ ಪೆÇೀಸ್ಟ್ ಹರಿಯಬಿಟ್ಟಿದ್ದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 29/2024 ಕಲಂ 153(ಎ), 504, 507, 509 ಐಪಿಸಿ ಹಾಗೂ ಕಲಂ 66(ಆರ್) ಐ.ಟಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿಯು ಆ ಸಮಯದಲ್ಲಿ ಸೌದಿ ಅರೇಬಿಯಾದಲ್ಲಿದ್ದು, ದಸ್ತಗಿರಿಗೆ ಸಿಕ್ಕಿರುವುದಿಲ್ಲ. ಆರೋಪಿ ಫೆಲಿಕ್ಸ್ ಎಡ್ವರ್ಡ್ ಮಥಾಯಿಸ್ ಮೂಲತ ಮುಂಬಯಿಯ ಚಾರ್ಕೋಪ್ ಎಂಬಲ್ಲಿಯವನಾಗಿದ್ದು, ಈತ ಸೌದಿ ಅರೇಬಿಯದಲ್ಲಿ ಉದ್ಯೋಗದಲ್ಲಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ, ಆರೋಪಿತನ ವಿರುದ್ದ ಲುಕ್ ಔಟ್ ಸರ್ಕುಲರ್ (ಎಲ್ ಒ ಸಿ) ಹೊರಡಿಸಲಾಗಿತ್ತು.
ಆರೋಪಿಯು ಮುಂಬಯಿಯ ಸಹರಾ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಬಂದು ಇಳಿದವನನ್ನು ಇಮಿಗ್ರೇಶನ್ ಅಧಿಕಾರಿಗಳು ತಡೆಹಿಡಿದು ಮಾಹಿತಿ ನೀಡಿದ್ದು, ಅದರಂತೆ ಆತನನ್ನು ಡಿಸೆಂಬರ್ 5 ರಂದು ಮುಂಬಯಿಯ ಸಹರಾ ಏರ್ ಪೆÇೀರ್ಟಿನಲ್ಲಿ ದಸ್ತಗಿರಿ ಮಾಡಿ ತನಿಖೆಗೆ ಒಳಪಡಿಸಿ, ಮಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಯ ಪಾಸ್ ಪೆÇೀರ್ಟ್ ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯಕ್ಕೆ ಪೊಲೀಸರು ವರದಿ ಸಲ್ಲಿಸಿದ್ದಾರೆ. ಪ್ರಕರಣದ ಇನ್ನೋರ್ವ ಆರೋಪಿ ಎವಿಜಿನ್ ಜಾನ್ ಡಿಸೋಜಾ (57) ಎಂಬಾತನನ್ನು 2024 ರ ಆಗಸ್ಟ್ 11 ರಂದು ದಸ್ತಗಿರಿ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು, ಪ್ರಕರಣದಲ್ಲಿ ತನಿಖೆ ಮುಂದುವರೆದಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.














0 comments:
Post a Comment