ಬಂಟ್ವಾಳ, ಡಿಸೆಂಬರ್ 02, 2025 (ಕರಾವಳಿ ಟೈಮ್ಸ್) : ಕೇಪು ಗ್ರಾಮದ ಕುದ್ದುಪದವು ಎಂಬಲ್ಲಿ ಸ್ಕೂಟರುಗಳ ನಡುವೆ ನಡೆದ ಅಪಘಾತದಲ್ಲಿ ಮಗು ಸಹಿತ ನಾಲ್ವರು ಗಾಯಗೊಂಡ ಘಟನೆ ನ 30 ರಂದು ಸಂಜೆ ನಡೆದಿದೆ.
ಗಾಯಗೊಂಡವರನ್ನು ಕೇಪು-ಚೆಲ್ಲಡ್ಕ ನಿವಾಸಿ ಗೋಪಾಲ ನಾಯ್ಕ್ ಸಿ ಎಚ್ (48), ಅವರ ಅಕ್ಕ ಮಾಲತಿ ಅವರ ಏಳು ತಿಂಗಳ ಮಗು ವಿನಮ್ಯ ಹಾಗೂ ಇನ್ನೊಂದು ಸ್ಕೂಟರ್ ಸವಾರ ನಾರಾಯಣ ಎಂದು ಹೆಸರಿಸಲಾಗಿದೆ.
ಗೋಪಾಲ ಅವರು ಸ್ಕೂಟರಿನಲ್ಲಿ ಮಾಲತಿ ಹಾಗೂ ಆಕೆಯ ಮಗುವನ್ನು ಔಷಧಿ ತರಲೆಂದು ಕರೆದುಕೊಂಡು ಹೋಗುತ್ತಿದ್ದ ವೇಳೆ ಕೇಪು ಗ್ರಾಮದ ಕುದ್ದುಪದವು ಎಂಬಲ್ಲಿಗೆ ತಲುಪಿದಾಗ ಹಿಂದಿನಿಂದ ಬರುತ್ತಿದ್ದ ನಾರಾಯಣ ಅವರು ಚಲಾಯಿಸಿಕೊಂಡು ಬಂದ ಸ್ಕೂಟರ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯರು ತಕ್ಷಣ ವಿಟ್ಲ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ಮಾಲತಿ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ, ಮಗು ವಿನಮ್ಯನನ್ನು ಪುತ್ತೂರಿನ ಚೇತನಾ ಆಸ್ಪತ್ರೆಗೆ, ಅಪಘಾತಪಡಿಸಿದ ಸ್ಕೂಟರ್ ಸವಾರ ನಾರಾಣನನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment