ಬಂಟ್ವಾಳ, ಡಿಸೆಂಬರ್ 11, 2025 (ಕರಾವಳಿ ಟೈಮ್ಸ್) : ಸಾರ್ವಜನಿಕ ಸ್ಥಳದಲ್ಲಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ವಿಟ್ಲ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಓರ್ವ ಪರಾರಿಯಾದ ಘಟನೆ ಕೇಪು ಗ್ರಾಮದ ಕುದ್ದುಪದವು ಎಂಬಲ್ಲಿ ಡಿ 10 ರಂದು ನಡೆದಿದೆ.
ಬಂಧಿತರನ್ನು ಮಣಿಪುರ ರಾಜ್ಯ ಮೂಲದ ಬಿಸ್ವಜಿತ್ ದೇಕಾ (28) ಹಾಗೂ ಅಳಿಕೆ ಗ್ರಾಮದ ನಿವಾಸಿ ಆನಂದ ಪೂಜಾರಿ (69) ಎಂದು ಹೆಸರಿಸಲಾಗಿದ್ದು, ಓಡಿ ಪರಾರಿಯಾದಾತನನ್ನು ನಾರಾಯಣ ಚೆಲ್ಲಡ್ಕ ಎಂದು ಗುರುತಿಸಲಾಗಿದೆ.
ಬುಧವಾರ ರಾತ್ರಿ ಕೇಪು ಗ್ರಾಮದ ಕುದ್ದುಪದವು ಎಂಬಲ್ಲಿ ರಸ್ತೆ ಬದಿಯಲ್ಲಿ ಜನರು ಕುಳಿತು ಕಾನೂನು ಬಾಹಿರವಾಗಿ ಮದ್ಯಸೇವನೆ ಮಾಡುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ, ಪೊಲೀಸರು ಸ್ಥಳಕ್ಕೆ ತೆರಳಿದಾಗ ಅಲ್ಲಿನ ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ಮೂವರು ಕುಳಿತುಕೊಂಡು ಕೈಯಲ್ಲಿ ಮದ್ಯ ತುಂಬಿದ ಗ್ಲಾಸು ಹಿಡಿದುಕೊಂಡು ಕುಡಿಯುತ್ತಿರುವುದು ಕಂಡುಬಂದಿದೆ. ಆ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಪರಾರಿಯಾಗಿದ್ದಾನೆ. ಸ್ಥಳದಲ್ಲಿ ಮದ್ಯತುಂಬಿದ 180 ಎಂಎಲ್ ತೂಕದ 5 ಟೇಟ್ರಾ ಪ್ಯಾಕೇಟುಗಳು, 90 ಎಂಎಲ್ ತೂಕದ 3 ಟೇಟ್ರಾ ಪ್ಯಾಕೇಟುಗಳು, 1 ಖಾಲಿ ಟೇಟ್ರಾ ಪ್ಯಾಕೇಟ್ ಹಾಗೂ 1 ಗಾಜಿನ ಲೋಟ, 1 ಪೈಬರ್ ಲೋಟಾ ಮತ್ತು 3 ಪ್ಲಾಸ್ಟಿಕ್ ಲೋಟಾಗಳು ಕಂಡುಬಂದಿದೆ. ಆರೋಪಿಗಳು ಎಲ್ಲಿಂದಲೋ ಮದ್ಯವನ್ನು ತಂದು, ಯಾವುದೇ ಪರವಾನಿಗೆಯಿಲ್ಲದೇ ಸದ್ರಿ ಸ್ಥಳದಲ್ಲಿ ಅಮಲು ಪದಾರ್ಥ ಸೇವಿಸುತ್ತಿರುವುದು ಹಾಗೂ ಆರೋಪಿಗಳ ಮದ್ಯ ಸೇವನೆಗೆ ಆರೋಪಿಗಳ ಪೈಕಿ ಆನಂದ ಪೂಜಾರಿ ನೀರು ಹಾಗೂ ಲೋಟವನ್ನು ನೀಡಿ ಸಹಕರಿಸುತ್ತಿರುವುದು ತಿಳಿದು ಬಂದಿದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮಕ್ಕಾಗಿ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment