ಬಂಟ್ವಾಳ, ಡಿಸೆಂಬರ್ 01, 2025 (ಕರಾವಳಿ ಟೈಮ್ಸ್) : ಮನೆ ಮಂದಿ ಮಗಳ ಮದುವೆ ಕಾರ್ಯದ ನಿಮಿತ್ತ ಸಮುದಾಯ ಭವನಕ್ಕೆ ತೆರಳಿದ್ದ ವೇಳೆ ಮನೆಯ ವಿದ್ಯುತ್ ರಿಪೇರಿ ಮಾಡುವ ನೆಪದಲ್ಲಿ ಒಳ ಪ್ರವೇಶಿಸಿ ವ್ಯಕ್ತಿ ಚಿನ್ನಾಭರಣ ಹಾಗೂ ನಗದು ಹಣ ಕಳವಗೈದ ಘಟನೆ ಇರಾ ಗ್ರಾಮದ ಕುರಿಯಾಡಿ ಎಂಬಲ್ಲಿ ನ 30 ರಂದು ಸಂಭವಿಸಿದೆ.
ಇಲ್ಲಿನ ನಿವಾಸಿ ಪದ್ಮನಾಭ ಬೆಳ್ಚಡ (60) ಅವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದ್ದು, ನ 30 ರಂದು ಇವರು ಮತ್ತು ಮನೆ ಮಂದಿ ಮಗಳ ಮದುವೆಯ ನಿಮಿತ್ತ ಬೆಳಿಗ್ಗೆ 7.45 ಗಂಟೆಗೆ ಉಪ್ಪಳ ಐಲ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಧಾರೆ ಕಾರ್ಯಕ್ರಮ ಮುಗಿಸಿ ನಂತರ ಆರಕ್ಷತೆ ಕಾರ್ಯಕ್ರಮಕ್ಕೆ ಬೈಬಳಿಕೆ ಕುಲಾಲ ಸಮುದಾಯ ಭವನಕ್ಕೆ ಹೋಗಿದ್ದರು. ತಾಯಿ ಹಾಗೂ ಸಂಬಂಧಿ ರತಿ ಅವರು ಮದುವೆಗೆ ಹೋಗದೇ ಮನೆಯಲ್ಲಿಯೇ ಇದ್ದರು. ಈ ಸಂದರ್ಭ ಸುಮಾರು 11 ಗಂಟೆಗೆ ಅಪರಿಚಿತ ವ್ಯಕ್ತಿಯೋರ್ವ ಪದ್ಮನಾಭ ಅವರು ಮನೆಯ ವಿದ್ಯತ್ ರಿಪೇರಿ ಮಾಡಲು ಹೇಳಿರುತ್ತಾರೆ ಎಂದು ಹೇಳಿ ಮನೆಯ ಬೆಡ್ ರೂಮ್ ಒಳಗೆ ಹೋಗಿ ಬೆಡ್ ರೂಮಿನಲ್ಲಿ ಮೂಲೆಯಲ್ಲಿ ಬ್ಯಾಗಿನ ಒಳಗೆ ಪರ್ಸ್ ನಲ್ಲಿಟ್ಟಿದ್ದ 1.20 ಲಕ್ಷ ರೂಪಾಯಿ ಮೌಲ್ಯದ 2 ಪವನ್ ಚಿನ್ನದ ಒಂದು ಜೊತೆ ಬೆಂಡೋಲೆ ಹಾಗೂ 20 ಸಾವಿರ ರೂಪಾಯಿ ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾನೆ. ಮದುವೆ ಕಾರ್ಯಕ್ರಮ ಮುಗಿಸಿ ಸಂಜೆ 5 ಗಂಟೆ ವೇಳೆಗೆ ವಾಪಾಸು ಮನೆಗೆ ಬಂದಾಗ ಪದ್ಮನಾಭ ಅವರ ಹೆಂಡತಿಯ ತಂಗಿ ವಿಮಲ ಅವರು ಬೆಡ್ ರೂಮಿನ ಒಳಗೆ ಮೂಲೆಯಲ್ಲಿ ಇಟ್ಟಿದ್ದ ಬ್ಯಾಗ್ ಜಿಪ್ ತೆರೆದಿದ್ದು ಅದರ ಒಳಗೆ ಪರ್ಸ್ ನಲ್ಲಿದ್ದ ಚಿನ್ನದ ಬೆಂಡೋಲೆ ಹಾಗೂ ನಗದು ಕಳವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment