ಬಂಟ್ವಾಳ, ಡಿಸೆಂಬರ್ 01, 2025 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ಬಂಟ್ವಾಳ ಕೆಳಪೇಟೆ ರಸ್ತೆಯ ಎಂ ಜೆ ಬಿಲ್ಡಿಂಗ್ ಹತ್ತಿರ ನಿಲ್ಲಿಸಲಾಗಿದ್ದ ಆಕ್ಟಿವಾ ಹೋಂಡಾ ದ್ವಿಚಕ್ರ ವಾಹನ ಕಳವುಗೈದ ಘಟನೆ ನ 29 ರಂದು ರಾತ್ರಿ ಸಂಭವಿಸಿದೆ.
ಮೆಲ್ಕಾರ್ ಸಮೀಪದ ರೆಂಗೇಲು ನಿವಾಸಿ ಉಸ್ಮಾನ್ (53) ಎಂಬವರು ನ 29 ರಂದು ರಾತ್ರಿ ಸುಮಾರು 9 ಗಂಟೆ ವೇಳೆಗೆ ತನ್ನ ಕೆಎ19 ಇಎಕ್ಸ್ 2512 ನೋಂದಣಿ ಸಂಖ್ಯೆಯ ಗ್ರೇ ಬಣ್ಣದ ಆಕ್ಟಿವಾ ದ್ವಿಚಕ್ರ ವಾಹನವನ್ನು ಬಂಟ್ವಾಳದ ಕೆಳಗಿನ ಪೇಟೆ ರಸ್ತೆಯ ಬಳಿ ಎಂ ಜೆ ಬಿಲ್ಡಿಂಗ್ ಹತ್ತಿರ ನಿಲ್ಲಿಸಿ ಬಿ ಸಿ ರೋಡಿನಲ್ಲಿನ ಬಂಟ್ವಾಳ ಉತ್ಸವ ಕಾರ್ಯಕ್ರಮಕ್ಕೆ ತೆರಳಿ ವಾಪಸು ಬರುವಷ್ಟರಲ್ಲಿ ರಾತ್ರಿ ಸುಮಾರು 10 ಗಂಟೆ ವೇಳೆಗೆ ದ್ವಿಚಕ್ರ ವಾಹನ ಕಳವಾಗಿದೆ. ಕಳವಾಗಿರುವ ದ್ವಿಚಕ್ರ ವಾಹನದ ಅಂದಾಜು ಮೌಲ್ಯ 50 ಸಾವಿರ ರೂಪಾಯಿಗಳು. ಈ ಬಗ್ಗೆ ಉಸ್ಮಾನ್ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment