ಬಂಟ್ವಾಳ, ಡಿಸೆಂಬರ್ 01, 2025 (ಕರಾವಳಿ ಟೈಮ್ಸ್) : ಬಿ ಸಿ ರೋಡು ಸಮೀಪದ ಕೈಕಂಬ ಜಂಕ್ಷನ್ನಿನಲ್ಲಿ ಸ್ಕೂಟರುಗಳ ಮಧ್ಯೆ ನಡೆದ ಅಪಘಾತದಲ್ಲಿ ಇಬ್ಬರು ಗಾಯಗೊಂಡ ಘಟನೆ ನ 29 ರಂದು ರಾತ್ರಿ ಸಂಭವಿಸಿದೆ.
ಪರ್ಲಿಯ ನಿವಾಸಿ ಅಬುಸಾಲಿಹ್ (45) ಅವರು ನ 29 ರಂದು ಸ್ಕೂಟರಿನಲ್ಲಿ ಮೊಹಮ್ಮದ್ ಇಬ್ರಾಹಿಂ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಅಗತ್ಯದ ಕೆಲಸದ ನಿಮಿತ್ತ ಬಿ ಸಿ ರೋಡು ಪೇಟೆಗೆ ತೆರಳುತ್ತಿದ್ದ ವೇಳೆ ಕೈಕಂಬ ಜಂಕ್ಷನ್ ತಲುಪಿದಾಗ ರಾತ್ರಿ 9.30 ರ ವೇಳೆಗೆ ಸ್ಕೂಟರನ್ನು ಇಂಡಿಕೇಟರ್ ಹಾಕಿ ಬಲಗಡೆಗೆ ತಿರುಗಿಸಿದ ಬಳಿಕ ಹಿಂದುಗಡೆಯಿಂದ ಬಿ ಸಿ ರೋಡು ಕಡೆಯಿಂದ ಮಂಗಳೂರು ಕಡೆಗೆ ಸಿಯಾಬ್ ಎಂಬವರು ಮಲಿಕ್ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಬರುತ್ತಿದ್ದ ಸ್ಕೂಟರ್ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಮೊಹಮ್ಮದ್ ಇಬ್ರಾಹಿಂ ಅವರ ತಲೆಗೆ ರಕ್ತ ಗಾಯವಾಗಿದೆ. ಸಿಯಾಬ್ ಅವರಿಗೂ ಕೈಗೆ ಗಾಯವಾಗಿದೆ. ಗಾಯಾಳು ಮೊಹಮ್ಮದ್ ಇಬ್ರಾಹಿಂ ಅವರನ್ನು ಅಬ್ದುಲ್ ಸತ್ತಾರ್ ಅವರನ್ನು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment