ಬಂಟ್ವಾಳ, ಡಿಸೆಂಬರ್ 01, 2025 (ಕರಾವಳಿ ಟೈಮ್ಸ್) : ಕರಿಯಂಗಳ ಗ್ರಾಮದ ಹೊಳೆಬದಿ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕ ಸ್ಥಳಕ್ಕೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಐವರನ್ನು ಬಂಧಿಸಿದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಬಂಧಿತ ಆರೋಪಿಗಳನ್ನು ಚಂದ್ರಹಾಸ ಪೂಜಾರಿ, ಅನಿಲ್ ಕುಮಾರ್, ಸತೀಶ್, ಕುಂಞÂ ರಾಮ ಹಗೂ ಲಕ್ಷ್ಮಣ ಎಂದು ಹೆಸರಿಸಲಾಗಿದೆ. ಇತರ 5 ಮಂದಿ ಆರೋಪಿಗಳು ಓಡಿ ಪರಾರಿಯಗಿದ್ದು, ಈ ಪೈಕಿ ದೇವಿ ಮಳಲಿ ಎಂಬಾತನನ್ನು ಗುರುತಿಸಲಾಗಿದ್ದು, ಇತರರ ಪರಿಚಯ ತಿಳಿದು ಬರಬೇಕಷ್ಟೆ.
ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈ ಅವರು ಸಿಬ್ಬಂದಿಗಳ ಜೊತೆ ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment