ಮಂಗಳೂರು, ಡಿಸೆಂಬರ್ 02, 2025 (ಕರಾವಳಿ ಟೈಮ್ಸ್) : ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಂಗ್ರ-ಕೂಳೂರು ಫಲ್ಗುಣಿ ನದಿಯ ಬಳಿ ಗಾಂಜಾ ಹಾಗೂ ಎಂ.ಡಿ.ಎಂ ಮಾರಾಟ ಯತ್ನ ಪ್ರಕರಣ ಬೇಧಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ.
ಬಂಧಿತ ಆರೋಪಿಗಳನ್ನು ತುಮಕೂರು ಜಿಲ್ಲೆಯ ಪಿ ಎಚ್ ಕಾಲೊನಿ, 13ನೇ ಕ್ರಾಸ್ ನಿಮ್ರಾ ಮಸೀದಿ ಬಳಿ ನಿವಾಸಿ ದಿವಂಗತ ಅಜೀಜ್ ಖಾನ್ ಎಂಬವರ ಪುತ್ರ ಶಾಫಿ ಅಹ್ಮದ್ (40) ಹಾಗೂ ತುಮಕೂರು ಕೋತಿಪುರ, ಅಪೋಲೋ ಮೆಡಿಕಲ್ ರಸ್ತೆ ನಿವಾಸಿ ಮೊಹಮ್ಮದ್ ರಫೀ ಎಂಬವರ ಪುತ್ರ ಮೊಹಮ್ಮದ್ ಸಮೀರ್ (20) ಎಂದು ಗುರುತಿಸಲಾಗಿದೆ.
ಪಣಂಬೂರು ಎಸಿಪಿ ಶ್ರೀಕಾಂತ್ ಕೆ., ಕಾವೂರು ಪೊಲೀಸ್ ಇನ್ಸ್ ಪೆಕ್ಟರ್ ರಾಘವೇಂದ್ರ, ಪಿಎಸ್ಸೈ ಮಲ್ಲಿಕಾರ್ಜುನ, ಎಎಸ್ಸೈ ಚಂದ್ರಶೇಖರ, ಸಿಬ್ಬಂದಿಗಳಾದ ರೆಜಿ ಎಂ, ಹಾಲೇಶ್ ನಾಯ್ಕ್, ರಿಯಾಜ್ ಅವರ ತಂಡ ಈ ಕಾರ್ಯಾಚರಣೆ ನಡೆಸಿದೆ.
ಬಂಧಿತರಿಂದ 70 ಸಾವಿರ ರೂಪಾಯಿ ಮೌಲ್ಯದ ಸುಮಾರು 12 ಗ್ರಾಂ ಎಂ.ಡಿ.ಎಂ, 10 ಸಾವಿರ ರೂಪಾಯಿ ಮೌಲ್ಯದ 275 ಗ್ರಾಂ ಗಾಂಜಾ ಹಾಗೂ 2 ಮೊಬೈಲ್ ಪೆÇೀನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಗಾಂಜಾ ಮತ್ತು ಎಂ.ಡಿ.ಎಂನ್ನು ಬೆಂಗಳೂರಿನಲ್ಲಿ ನಿಗ್ರೋಗಳ ಬಳಿ ಖರೀದಿಸಿರುವುದಾಗಿ ತಿಳಿಸಿದ್ದಾರೆ.
ಆರೋಪಿ ಶಾಫಿ ಅಹ್ಮದ್ ಎಂಬಾತನ ಮೇಲೆ ಮಂಗಳೂರು ನಗರ ಉಳ್ಳಾಲ ಪೊಲೀಸ್ ಠಾಣೆ ಹಾಗೂ ತುಮಕೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 9 ಪ್ರಕರಣಗಳು ದಾಖಲಾಗಿದ್ದು, ಹಲವು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು ನ್ಯಾಯಾಲಯವು ವಾರಂಟ್ ಹಾಗೂ ಪೆÇ್ರಕ್ಲಮೇಶನ್ ಜ್ಯಾರಿಗೊಳಿಸಿದೆ. ಆರೋಪಿ ಸಮೀರ್ ವಿರುದ್ದ 1 ಪ್ರಕರಣ ದಾಖಲಾಗಿದೆ.















0 comments:
Post a Comment