ಬಂಟ್ವಾಳ, ಡಿಸೆಂಬರ್ 31, 2025 (ಕರಾವಳಿ ಟೈಮ್ಸ್) : ಯಂಗ್ ಇಲೆವನ್ ಕ್ರಿಕೆಟರ್ಸ್ ಲೊರೆಟ್ಟೊಪದವು-ಬಂಟ್ವಾಳ ಇದರ ಆಶ್ರಯದಲ್ಲಿ ಯಂಗ್ ಇಲೆವನ್ ಟ್ರೋಫಿ-2026 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜನವರಿ 3 ಶನಿವಾರ ಹಾಗೂ ಜನವರಿ 4 ಭಾನುವಾರ ಲೊರೆಟ್ಟೊಪದವು ಮೆಲ್ವಿನ್ ಮೈದಾನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ, ಎಂಎಲ್ಸಿ ಐವನ್ ಡಿಸೋಜ, ಕೆಪಿಸಿಸಿ ಸದಸ್ಯರಾದ ಪಿಯುಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಪುರಸಭಾ ನಿಕಟಪೂರ್ವಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಮಿಥುನ್ ರೈ, ಪದ್ಮರಾಜ್ ಆರ್ ಪೂಜಾರಿ, ಬಿ ಆರ್ ಅಂಚನ್, ಚಂದ್ರಶೇಖರ ಭಂಡಾರಿ, ಆರ್ಥರ್ ರಾಜೇಶ್ ರೋಡ್ರಿಗಸ್, ಸುರೇಶ್ ಜೋರಾ, ಲುಕ್ಮಾನ್ ಬಂಟ್ವಾಳ, ದೇವಪ್ಪ ಕುಲಾಲ್ ಮೊದಲಾದವರು ಭಾಗವಹಿಸುವರು.
ಪಂದ್ಯಾಟದಲ್ಲಿ ವಿಜೇತ ತಂಡಕ್ಕೆ 50,555/- ನಗದು ಸಹಿತ ಟ್ರೋಫಿ ಹಾಗೂ ರನ್ನರ್ಸ್ ತಂಡಕ್ಕೆ 20,222/- ನಗದು ಸಹಿತ ಟ್ರೋಫಿ ಮತ್ತು ಇತರ ವೈಯುಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಕ್ರೀಡಾಕೂಟದ ವ್ಯವಸ್ಥಾಪಕ ಬಿ ಎಚ್ ಯಾಕೂಬ್ ಲೊರೆಟ್ಟೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


















0 comments:
Post a Comment