ನಿವೃತ್ತ ಪ್ರಾಂಶುಪಾಲರ ಮನೆಯಲ್ಲಿ ದರೋಡೆಗೆ ಯತ್ನಿಸಿದ ಪ್ರಕರಣ ಬೇಧಿಸಿದ ಪುತ್ತೂರು ನಗರ ಪೊಲೀಸರು : ಆರೋಪಿ ಸಹಾಯಕ ಅರ್ಚಕ ಹಾಗೂ ಪತ್ನಿ ಬಂಧನ - Karavali Times ನಿವೃತ್ತ ಪ್ರಾಂಶುಪಾಲರ ಮನೆಯಲ್ಲಿ ದರೋಡೆಗೆ ಯತ್ನಿಸಿದ ಪ್ರಕರಣ ಬೇಧಿಸಿದ ಪುತ್ತೂರು ನಗರ ಪೊಲೀಸರು : ಆರೋಪಿ ಸಹಾಯಕ ಅರ್ಚಕ ಹಾಗೂ ಪತ್ನಿ ಬಂಧನ - Karavali Times

728x90

31 December 2025

ನಿವೃತ್ತ ಪ್ರಾಂಶುಪಾಲರ ಮನೆಯಲ್ಲಿ ದರೋಡೆಗೆ ಯತ್ನಿಸಿದ ಪ್ರಕರಣ ಬೇಧಿಸಿದ ಪುತ್ತೂರು ನಗರ ಪೊಲೀಸರು : ಆರೋಪಿ ಸಹಾಯಕ ಅರ್ಚಕ ಹಾಗೂ ಪತ್ನಿ ಬಂಧನ

ಪುತ್ತೂರು, ಡಿಸೆಂಬರ್ 31, 2025 (ಕರಾವಳಿ ಟೈಮ್ಸ್) : ನಿವೃತ್ತ ಪ್ರಾಂಶುಪಾಲರ ಮನೆಯಲ್ಲಿ ದರೋಡೆ ಯತ್ನ ಪ್ರಕರಣ ಬೇಧಿಸಿದ ಪುತ್ತೂರು ನಗರ ಠಾಣಾ ಪೊಲೀಸರು ಆರೋಪಿ ದಂಪತಿಗಳನ್ನು ಬಂಧಿಸಿದ್ದಾರೆ. 

ಬಂಧಿತ ದಂಪತಿಗಳನ್ನು ಮೂಲತಃ ಪುತ್ತೂರು ಮೂಡೂರು ನಿವಾಸಿ, ಪ್ರಸ್ತುತ ಪಂಜ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಸಹಾಯಕ ಅರ್ಚಕ ವೃತ್ತಿಯ ಕಾರ್ತಿಕ್ ರಾವ್ (31) ಹಾಗೂ ಆತನ ಪತ್ನಿ ಕೆ ಎಸ್ ಸ್ವಾತಿ ರಾವ್ (25) ಎಂದು ಹೆಸರಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ. 

ಪುತ್ತೂರು ಕಸಬಾ ನಿವಾಸಿ, ನಿವೃತ್ತ ಪ್ರಾಂಶುಪಾಲ ಎ.ವಿ ನಾರಾಯಣ (84) ಎಂಬವರ ಮನೆಯಲ್ಲಿ ಡಿ 17 ರಂದು ಮಧ್ಯರಾತ್ರಿ ವೇಳೆ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು, ಹೆಲ್ಮೆಟ್ ಧರಿಸಿಕೊಂಡು, ಮುಖ ಚಹರೆ ಮರೆಮಾಚಿ, ಮನೆಯಿಂದ ಬೆಲೆ ಬಾಳುವ ಸೊತ್ತುಗಳನ್ನು ಕಳ್ಳತನ ಮಾಡಲು ಮನೆಯ ಹಿಂಬಾಗಿಲಿನಿಂದ ಮನೆಗೆ ಪ್ರವೇಶಿಸಿ ನಾರಾಯಣ ಹಾಗೂ ಅವರ ಪತ್ನಿಯನ್ನು ಬೆದರಿಸಿದ್ದಾರೆ. ಈ ವೇಳೆ ನಡೆದ ತಳ್ಳಾಟದಲ್ಲಿ ಪತ್ನಿಗೆ ಗಾಯವಾಗಿದೆ. ಈ ಸಂದರ್ಭ ನಾರಾಯಣ ಅವರು ಜೋರಾಗಿ ಕಿರುಚಿರುತ್ತಾರೆ. ಇದರಿಂದ ಹೆದರಿದ ಆರೋಪಿಗಳು ಮನೆಯ ಹಿಂಬಾಗಿಲಿನ ಮೂಲಕ ಓಡಿ ಪರಾರಿಯಾಗಿರುತ್ತಾರೆ. ಮನೆಯಲ್ಲಿದ್ದ ಯಾವುದೇ ಸೊತ್ತುಗಳು ಕಳ್ಳತನವಾಗಿರುವುದಿಲ್ಲ. ಈ ಬಗ್ಗೆ ನಾರಾಯಣ ಅವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪುತ್ತೂರು ನಗರ ಪೆÇಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ನಿವೃತ್ತ ಪ್ರಾಂಶುಪಾಲರ ಮನೆಯಲ್ಲಿ ದರೋಡೆಗೆ ಯತ್ನಿಸಿದ ಪ್ರಕರಣ ಬೇಧಿಸಿದ ಪುತ್ತೂರು ನಗರ ಪೊಲೀಸರು : ಆರೋಪಿ ಸಹಾಯಕ ಅರ್ಚಕ ಹಾಗೂ ಪತ್ನಿ ಬಂಧನ Rating: 5 Reviewed By: karavali Times
Scroll to Top