ಬಂಟ್ವಾಳ, ಡಿಸೆಂಬರ್ 16, 2025 (ಕರಾವಳಿ ಟೈಮ್ಸ್) : ಬಿ ಸಿ ರೋಡಿನಲ್ಲಿ ಅಂಗಡಿಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿದ ಘಟನೆ ಡಿ 15 ರಂದು ಬೆಳಕಿಗೆ ಬಂದಿದೆ.
ಪರ್ಲಿಯಾ ನಿವಾಸಿ ಮೊಹಮ್ಮದ್ ಡಿ (63) ಎಂಬವರ ಬಿ ಸಿ ರೋಡಿನಲ್ಲಿರುವ ದೆಂಜಿಪಾಡಿ ಜನರಲ್ ಸ್ಟೋರ್ ಎಂಬ ಕಿರಾಣಿ ಅಂಗಡಿಯಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ. ಇವರು ಡಿ 15 ರಂದು ಬೆಳಿಗ್ಗೆ 8 ಗಂಟೆಗೆ ಅಂಗಡಿ ತೆರೆಯಲು ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಅಂಗಡಿಯ ಹಿಂದಿನ ಭಾಗದ ಕಿಟಕಿ ಹೊಡೆದು ಒಳ ಪ್ರವೇಶಿಸಿದ ಕಳ್ಳರು ಅಂಗಡಿಯಲ್ಲಿದ್ದ ಸುಮಾರು 60 ಸಾವಿರ ರೂಪಾಯಿ ಮೌಲ್ಯದ ಸಿಗರೇಟ್ ಪ್ಯಾಕೇಟ್, 18 ಸಾವಿರ ರೂಪಾಯಿ ಮೌಲ್ಯದ ತುಪ್ಪ, 11 ಸಾವಿರ ರೂಪಾಯಿ ಮೌಲ್ಯದ ಡ್ರೈಪ್ರುಟ್ಸ್, 8,500/- ರೂಪಾಯಿ ಕಾಯಿನ್ಸ್ ಸೇರಿದಂತೆ ಇತರ ಕೆಲವು ವಸ್ತುಗಳನ್ನು ಕಳ್ಳತನ ಮಾಡಿರುವುದು ಅಂಗಡಿಯ ಸಿಸಿ ಟಿವಿಯಲ್ಲಿ ದಾಖಲಾಗಿದೆ. ಕಳವಾಗಿರುವ ವಸ್ತುಗಳ ಒಟ್ಟು ಮೌಲ್ಯ 1 ಲಕ್ಷ ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment