ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ 25 ಪ್ರಕರಣಗಳ ಸರದಾರ ಕೇರಳ ಮೂಲದ ವಾರಂಟ್ ಆಸಾಮಿಯನ್ನು ಬಂಧಿಸಿದ ಮಂಗಳೂರು ಪೊಲೀಸರು - Karavali Times ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ 25 ಪ್ರಕರಣಗಳ ಸರದಾರ ಕೇರಳ ಮೂಲದ ವಾರಂಟ್ ಆಸಾಮಿಯನ್ನು ಬಂಧಿಸಿದ ಮಂಗಳೂರು ಪೊಲೀಸರು - Karavali Times

728x90

16 December 2025

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ 25 ಪ್ರಕರಣಗಳ ಸರದಾರ ಕೇರಳ ಮೂಲದ ವಾರಂಟ್ ಆಸಾಮಿಯನ್ನು ಬಂಧಿಸಿದ ಮಂಗಳೂರು ಪೊಲೀಸರು

ಮಂಗಳೂರು, ಡಿಸೆಂಬರ್ 16, 2025 (ಕರಾವಳಿ ಟೈಮ್ಸ್) : 25 ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ವಾರಂಟ್ ಆಸಾಮಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು, ಉಪ್ಪಳ ವಿಜಯಾ ಬ್ಯಾಂಕ್ ಎದುರಿನ ಮುಸ್ತಫಾ ಮಂಝಿಲ್ ನಿವಾಸಿ ದಿವಂಗತ ಹಸನ್ ಮೊಹಮ್ಮದ್ ಎಂಬವರ ಪುತ್ರ ಅಬ್ದುಲ್ ರವೂಫ್ ಅಲಿಯಾಸ್ ಮೀಸೆ ರವೂಫ್ (48) ಎಂದು ಹೆಸರಿಸಲಾಗಿದೆ. ಈತನ ಮೇಲೆ ಕೇರಳದ ಕಾಸರಗೋಡು ಜಿಲ್ಲೆಯ ವಿವಿಧ ಪೆÇಲೀಸ್ ಠಾಣೆಗಳಲ್ಲಿ ಸುಮಾರು 19 ಪ್ರಕರಣಗಳು ದಾಖಲಾಗಿರುತ್ತದೆ ಮತ್ತು ಮಂಗಳೂರು ನಗರದ ಕಾವೂರು ಪೆÇಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಹಾಗೂ ಕೋಣಾಜೆ ಪೊಲೀಸ್ ಠಾಣೆಯಲ್ಲಿ 5 ಪ್ರಕರಣಗಳು ಸೇರಿ ಒಟ್ಟು 25 ಪ್ರಕರಣಗಳು ದಾಖಲಾಗಿದೆ. 

ಕಾವೂರು ಠಾಣಾ ಪ್ರಕರಣದಲ್ಲಿ ನ್ಯಾಯಾಲಯವು ಈತನಿಗೆ ದಸ್ತಗಿರಿ ವಾರಂಟ್ ಹೊರಡಿಸಿರುತ್ತದೆ ಹಾಗೂ ಕೋಣಾಜೆ ಠಾಣೆಯ 5 ಪ್ರಕರಣಗಳಲ್ಲಿ  ಉದ್ಘೋಷಿತ ಅಪರಾಧಿ ಎಂದು ನ್ಯಾಯಾಲಯವು ಘೋಷಿಸಿರುತ್ತದೆ. ಮಂಜೇಶ್ವರ ಪೊಲೀಸ್ ಠಾಣೆಯ ಒಂದು ಪ್ರಕರಣದಲ್ಲಿ ನ್ಯಾಯಾಲಯವು ದಸ್ತಗಿರಿ ವಾರಂಟ್ ಹೊರಡಿಸಿದೆ.

ಈತ ಅಂತರಾಜ್ಯ ನಟೋರಿಯಸ್ ಕ್ರಿಮಿನಲ್ ಕೇರಳ ರಾಜ್ಯದ ಉಪ್ಪಳ ಪೈವಳಿಕೆಯ ಇಸುಬು ಜಿಯಾದ್ ಅಲಿಯಾಸ್ ಜಿಯಾ ಎಂಬಾತನ ಸಹಚರನಾಗಿರುತ್ತಾನೆ. ಈತನನ್ನು  ಉತ್ತರ ಉಪ ವಿಭಾಗದ ಎ.ಸಿ.ಪಿ ಶ್ರೀಕಾಂತ ಕೆ. ಅವರ ನೇತೃತ್ವದ ತಂಡದ ಎಸ್ಸೈ ಚಂದ್ರಶೇಖರ್, ಸಿಬ್ಬಂದಿಗಳಾದ ರೆಜಿ ವಿ.ಎಂ, ದಾಮೋದರ ಕೆ ಹಾಗೂ ಹಾಲೇಶ್ ನಾಯ್ಕ್ ಅವರು ಡಿ 16 ರಂದು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. 

ಅಬ್ದುಲ್ ರವೂಫ್ @ ಮೀಸೆ ರವೂಫ್ ಎಂಬಾತನ  ಮೇಲೆ ದಾಖಲಾದ ಪ್ರಕರಣಗಳ ವಿವರ 

1)   Kavoor P.S Cr No: 54/2017 U/s 398, 120B IPC &4, 25, 1AB Arms act- (NBW) 

2) Konaje P.S Cr No: 50/2020 U/s 457, 380 IPC -(Proclamation) 

3) Konaje P.S Cr No: 51/2020 U/s 457, 380 IPC- -(Proclamation)

4) Konaje P.S Cr No: 52/2020 U/s 457, 380 IPC -(Proclamation)

5) Konaje P.S Cr No: 53/2020 U/s 457, 380 IPC -(Proclamation)

6) Konaje P.S Cr No: 54/2020 U/s 457, 380 IPC-(Proclamation)

7) Manjeshwara PS Cr.No. 371/05 U/s 392 r/w 34 IPC 

8) Manjeshwara  PS Cr.No. 28/06 U/s  143,147,148,323,308 r/w 149 IPC

9) Manjeshwara PS Cr.No.189/08 U/s 395 IPC 

10) Manjeshwara PS Cr.No. 348/09 U/S 324,308 & SEC. 3(2)(e) OF PDPP ACT

11) Manjeshwara PS Cr.No. 409/11 U/s 324,452,506(1) r/w 34 IPC

12) Manjeshwara PS Cr.No. 141/19,4,25(1B)(b) Arms Act

13) Kumbla PS Cr. 414/2020 U/s 379 IPC 

14) Manjeshwara PS Cr. 141/2020 U/s 341,323 IPC

15) Manjeshwara PS Cr. 437/2020 U/s 454,380 IPC 

16) Kumbla PS Cr. 165/2021 U/s 457,380,461 IPC

17) Vidyanagar PS Cr.No. 238/2021U/s 457,380,461 IPC

18) Manjeshwara PS Cr. No. 93/2021 U/s 452,324,308,34 IPC

19) Vidyanagar PS Cr.No. 238/21 U/s 380,457,461 IPC

20) Manjeshwara PS Cr.No. 348/20 U/s 4,25(1-B)(b) of Arms act, 269,188 IPC and 4(2)(e), 5 of Kerala Epidemic Diseases Ordinance act, 269, 188 of IPC

21) Manjeshwara PS Cr. No. 229/14 u/s 107 CrPC

22) Kumbla Cr.No. 410/20 u/s 380,457,461 IPC

23) Manjeshwara PS Cr.No. 806/20 U/s 4(1)(d)102 CrPC altered sec 457,380 IPC 

24) Manjeshwara PS Cr.No. 141/21 U/s 380,457 IPC

25) Manjeshwara PS Cr.No. 873 / 2024 U/s 303(2) BNS

  • Blogger Comments
  • Facebook Comments

0 comments:

Post a Comment

Item Reviewed: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ 25 ಪ್ರಕರಣಗಳ ಸರದಾರ ಕೇರಳ ಮೂಲದ ವಾರಂಟ್ ಆಸಾಮಿಯನ್ನು ಬಂಧಿಸಿದ ಮಂಗಳೂರು ಪೊಲೀಸರು Rating: 5 Reviewed By: karavali Times
Scroll to Top