ಬಂಟ್ವಾಳ, ಡಿಸೆಂಬರ್ 12, 2025 (ಕರಾವಳಿ ಟೈಮ್ಸ್) : ಕೇರಳ ಮೂಲದ ರಬ್ಬರ್ ಟ್ಯಾಪಿಂಗ್ ಕಾರ್ಮಿಕನೋರ್ವ ಮಲಗಿದಲ್ಲೇ ಮೃತಪಟ್ಟ ಘಟನೆ ಕನ್ಯಾನ ಗ್ರಾಮದ ಸೇರಿಗುರಿ (ಕೇಕನಾಜೆ) ಎಂಬಲ್ಲಿ ಡಿ 12 ರಂದು ಸಂಭವಿಸಿದೆ.
ಮೃತ ಕಾರ್ಮಿಕನನ್ನು ಕೇರಳ ಮೂಲದ ಜಾನ್ ಕೆ ಎಂ (71) ಎಂದು ಹೆಸರಿಸಲಾಗಿದೆ. ಕನ್ಯಾನ ಗ್ರಾಮ ಬೈರಿಕಟ್ಟೆ ನಿವಾಸಿ ಅಲ್ಬರ್ಟ್ ಡಿಸೋಜ (58) ಎಂಬವರಿಗೆ ಸೇರಿದ ಕನ್ಯಾನ ಗ್ರಾಮದ ಸೇರಿಗುರಿ (ಕೇಕನಾಜೆ) ಎಂಬಲ್ಲಿ ತೋಟದಲ್ಲಿರುವ ಶೆಡ್ಡಿನಲ್ಲಿ ರಬ್ಬರ್ ಮರದ ಟ್ಯಾಪಿಂಗ್ ಕೆಲಸಕ್ಕೆ ಜಾನ್ ಅವರನ್ನು ನೇಮಿಸಿ ಅವರಿಗೆ ಅಲ್ಲೇ ವಾಸ ಮಾಡಲು ಅನುವು ಮಾಡಿಕೊಟ್ಟಿದ್ದರು.
ಜಾನ್ ಅವರು ಬಿ ಪಿ ಹಾಗೂ ಶುಗರ್ ಕಾಯಿಲೆಯಿಂದ ಬಳಲುತಿದ್ದವರು, ಡಿ 12 ರಂದು ಮಲಗುವ ಶೆಡ್ಡಿನಲ್ಲಿ ಮಲಗಿದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯು ಡಿ ಆರ್ ಪ್ರಕರಣ ದಾಖಲಾಗಿದೆ.














0 comments:
Post a Comment