ದೀರ್ಘ ಕಾಲ ಸಿಎಂ ಆಗಿ ಕಾರ್ಯನಿರ್ವಹಿಸಿದ ಇಬ್ಬರು ದಿಗ್ಗಜರ ಜೊತೆ ನಾನು ಹಾಗೂ ತಂದೆಯವರಿಗೆ ಜೊತೆಯಾಗಿರಲು ಅವಕಾಶ ದೊರೆತಿದೆ : ಸ್ಪೀಕರ್ ಖಾದರ್ - Karavali Times ದೀರ್ಘ ಕಾಲ ಸಿಎಂ ಆಗಿ ಕಾರ್ಯನಿರ್ವಹಿಸಿದ ಇಬ್ಬರು ದಿಗ್ಗಜರ ಜೊತೆ ನಾನು ಹಾಗೂ ತಂದೆಯವರಿಗೆ ಜೊತೆಯಾಗಿರಲು ಅವಕಾಶ ದೊರೆತಿದೆ : ಸ್ಪೀಕರ್ ಖಾದರ್ - Karavali Times

728x90

6 January 2026

ದೀರ್ಘ ಕಾಲ ಸಿಎಂ ಆಗಿ ಕಾರ್ಯನಿರ್ವಹಿಸಿದ ಇಬ್ಬರು ದಿಗ್ಗಜರ ಜೊತೆ ನಾನು ಹಾಗೂ ತಂದೆಯವರಿಗೆ ಜೊತೆಯಾಗಿರಲು ಅವಕಾಶ ದೊರೆತಿದೆ : ಸ್ಪೀಕರ್ ಖಾದರ್

ಮಂಗಳೂರು, ಜನವರಿ 06, 2026 (ಕರಾವಳಿ ಟೈಮ್ಸ್) : ದೇವರಾಜ್ ಅರಸ್ ದೀರ್ಘಕಾಲ ಮುಖ್ಯಮಂತ್ರಿಯಾಗಿದ್ದಾಗ ಅವರ ಜೊತೆ ನನ್ನ ತಂದೆ ಯು.ಟಿ. ಫರೀದ್ ಶಾಸಕರಾಗಿ ಜೊತೆಗಿದ್ದರು. ಈಗ ಸಿದ್ದರಾಮಯ್ಯ ಅವರು ದೀರ್ಘಕಾಲ ಮುಖ್ಯಮಂತ್ರಿಯಾಗಿರುವಾಗ ಅವರ ಜೊತೆ ನಾನು ಉನ್ನತ ಹುದ್ದೆಯಲ್ಲಿರುವುದು ಸಂತೋಷದ ವಿಚಾರ. ರಾಜ್ಯದ ದೀರ್ಘಾವದಿ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸುತ್ತಿರುವ ಸಿದ್ದರಾಮಯ್ಯನವರಿಗೆ ತುಂಬು ಹೃದಯದ ಶುಭಾಶಯಗಳು ಎಂದು ವಿಧಾನಸಭಾ ಸ್ಪೀಕರ್ ಡಾ ಯು.ಟಿ. ಖಾದರ್ ಹೇಳಿದ್ದಾರೆ.  

ರಾಜ್ಯದ ರಾಜಕೀಯದಲ್ಲಿ ಕಾಲಘಟ್ಟವನ್ನು ಸ್ಥಾಪಿಸಿದವರು ನೀವು. ಸಿದ್ದರಾಮಯ್ಯನವರ ಕಾಲ ಎಂದು ಜನ ಗರ್ವದಿಂದ ಹೇಳಿಕೊಳ್ಳುವ ಅವಧಿ ಕೊಟ್ಟಿದ್ದೀರಿ. ನಿಮ್ಮ ಅವಧಿಯಲ್ಲಿ ನಾವು ಜೊತೆಗಿದ್ದೆವು ಎಂಬುದು ನಮಗೂ ಹೆಮ್ಮಯ ವಿಷಯ. ಈ ಹಿಂದೆ ದೇವರಾಜ್ ಅರಸು ಅವರು ದಾಖಲೆ ಮಾಡಿದ್ದ ಸಂದರ್ಭದಲ್ಲಿ ನಮ್ಮ ತಂದೆ ಫರೀದ್ ಅವರ ಜೊತೆ ಶಾಸಕರಾಗಿ ಕೆಲಸ ಮಾಡಿದ್ದರು. ಈಗ ನಿಮ್ಮ ಜೊತೆ ನಾನು ಸಹ ಉನ್ನತ ಜವಾಬ್ದಾರಿ ನಿರ್ವಹಿಸುತ್ತಿರುವುದು ಖುಷಿಯ ವಿಚಾರ. ಒಡೆಯುವ ಈ ಜಗತ್ತಿನಲ್ಲಿ ನೀವು ಒಂದಾಗಿಸುವವರಿಗೆ ನಾಯಕತ್ವ ನೀಡಿದ್ದಿರಿ. ನೀವು ಹಿಡಿದಿರುವ ಸಮಾನತೆಯ ಹಣತೆಗೆ ನಾವು ಕೈಜೋಡಿಸುತ್ತೇವೆ. ಶೋಷಿತ, ಪೀಡಿತ ಹಾಗೂ ದಮನಿತರ ಪರ ನಿಮ್ಮ ದನಿಗೆ ನಾವು ದನಿಗೂಡಿಸುತ್ತೇವೆ. ಈ ಸಂದರ್ಭದಲ್ಲಿ ಸಮಾನತೆಯ ಸಮಾಜದ ಪಣ ಇನ್ನಷ್ಟು ಗಟ್ಟಿಗೊಳಿಸೋಣ... ಎಂದು ಸ್ಪೀಕರ್ ಯು ಟಿ ಖಾದರ್ ಶುಭಾಶಯ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ದೀರ್ಘ ಕಾಲ ಸಿಎಂ ಆಗಿ ಕಾರ್ಯನಿರ್ವಹಿಸಿದ ಇಬ್ಬರು ದಿಗ್ಗಜರ ಜೊತೆ ನಾನು ಹಾಗೂ ತಂದೆಯವರಿಗೆ ಜೊತೆಯಾಗಿರಲು ಅವಕಾಶ ದೊರೆತಿದೆ : ಸ್ಪೀಕರ್ ಖಾದರ್ Rating: 5 Reviewed By: karavali Times
Scroll to Top