![]() |
| ಸುರೇಶ್ ಪೂಜಾರಿ |
![]() |
| ಮುಹಮ್ಮದ್ ಗಝ್ಝಾಲಿ ಕೆಬಿಎಸ್ |
ಬಂಟ್ವಾಳ, ಜನವರಿ 25, 2026 (ಕರಾವಳಿ ಟೈಮ್ಸ್) : ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕುಗಳ ವಿಭಾಗದ ಬಂಟ್ವಾಳ ವಿಧಾನಸಭಾ ಕ್ಷೇತ್ರಾಧ್ಯಕ್ಷರಾಗಿ ಬಂಟ್ವಾಳ ವಕೀಲರ ಸಂಘದ ಮಾಜಿ ಅಧ್ಯಕ್ಷ, ಹಿರಿಯ ನೋಟರಿ-ನ್ಯಾಯವಾದಿ ಸುರೇಶ್ ಪೂಜಾರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಯುವ ನ್ಯಯವಾದಿ ಮುಹಮ್ಮದ್ ಗಝ್ಝಾಲಿ ಕೆಬಿಎಸ್ ಅವರು ನೇಮಕಗೊಂಡಿದ್ದಾರೆ.
ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಅವರ ವಿಶೇಷ ಶಿಫಾರಸ್ಸಿನಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸೂಚನೆ ಮೇರೆಗೆ ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕುಗಳ ವಿಭಾಗದ ರಾಜ್ಯಾಧ್ಯಕ್ಷ ಸಿ ಎಂ ಧನಂಜಯ ಅವರ ಆದೇಶದ ಮೇರೆಗೆ ದ ಕ ಜಿಲ್ಲಾದ್ಯಕ್ಷ ಮನೋರಾಜ್ ರಾಜೀವ್ ಅವರು ಈ ನೇಮಕಾರಿ ಆದೇಶ ಹೊರಡಿಸಿದ್ದಾರೆ.
ಉಪಾಧ್ಯಕ್ಷರಾಗಿ ಉಮಾಕರ ನೆಕ್ಕರಾಜೆ, ಕಾರ್ಯದರ್ಶಿಯಾಗಿ ವಿನ್ಸ್ ಲೆಟ್ ಪಿಂಟೋ ಅಲ್ಲಿಪಾದೆ, ಜೊತೆ ಕಾರ್ಯದರ್ಶಿಯಾಗಿ ನಿರ್ಮಲ ಮೊಡಂಕಾಪು, ಕೋಶಾಧಿಕಾರಿಯಾಗಿ ಮೋಹನ್ ಕುಮಾರ್ ನೆತ್ತರಕೆರೆ ಅವರನ್ನು ನೇಮಿಸಲಾಗಿದೆ.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಾಲಕೃಷ್ಣ ಅಂಚನ್ ಅವರು ಈ ನೇಮಕಕ್ಕೆ ಸಹಕರಿಸಿದ್ದಾರೆ.

























0 comments:
Post a Comment