ಬಂಟ್ವಾಳ : ಸ್ಕೂಟರ್ ಸವಾರಗೆ ಹಿಟ್ ಆಂಡ್ ರನ್ ನಡೆಸಿದ ಬೈಕ್ ಸವಾರ - Karavali Times ಬಂಟ್ವಾಳ : ಸ್ಕೂಟರ್ ಸವಾರಗೆ ಹಿಟ್ ಆಂಡ್ ರನ್ ನಡೆಸಿದ ಬೈಕ್ ಸವಾರ - Karavali Times

728x90

25 January 2026

ಬಂಟ್ವಾಳ : ಸ್ಕೂಟರ್ ಸವಾರಗೆ ಹಿಟ್ ಆಂಡ್ ರನ್ ನಡೆಸಿದ ಬೈಕ್ ಸವಾರ

 ಬಂಟ್ವಾಳ, ಜನವರಿ 26, 2026 (ಕರಾವಳಿ ಟೈಮ್ಸ್) : ಸ್ಕೂಟರಿಗೆ ಬೈಕ್ ಸವಾರನೋರ್ವ ಹಿಟ್ ಆಂಡ್ ರನ್ ನಡೆಸಿದ ಘಟನೆ ಬಿ ಮೂಡ ಗ್ರಾಮದ ಭಂಡಾರಿಬೆಟ್ಟು ಎಂಬಲ್ಲಿ ಸಂಭವಿಸಿದೆ. 

ಗಾಯಗೊಂಡ ಸ್ಕೂಟರ್ ಸವಾರನನ್ನು ಬಿ ಮೂಡ ಗ್ರಾಮದ ನಿವಾಸಿ ರವಿರಾಜ (59) ಎಂದು ಹೆಸರಿಸಲಾಗಿದೆ. ಇವರು ತನ್ನ ಸ್ಕೂಟರಿನಲ್ಲಿ ತನ್ನ ಮನೆಯಾದ ಬಿ ಮೂಡದಿಂದ ಬಂಟ್ವಾಳದ ವೆಂಕಟರಮಣ ದೇವಸ್ಥಾನಕ್ಕೆ ಹೋಗುವರೇ ಬಿ ಸಿ ರೋಡ್-ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದು ಬಿ ಮೂಡ ಗ್ರಾಮದ ಭಂಡಾರಿಬೆಟ್ಟು ಎಂಬಲ್ಲಿ ನೆರೆ ಪರಿಹಾರ ರಸ್ತೆಗೆ ತಿರುವು ತೆಗೆದುಕೊಳ್ಳುವಷ್ಟರಲ್ಲಿ ಹಿಂದಿನಿದ ಅಂದರೆ ಬಿ ಸಿ  ರೋಡು ಕಡೆಯಿಂದ ಬಂದ ಬೈಕ್ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಸ್ಕೂಟರಿಗೆ ಡಿಕ್ಕಿ ಪಡಿಸಿ ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗಿದ್ದಾನೆ. 

ಅಪಘಾತದಿಂದ ಸ್ಕೂಟರ್ ಸವಾರಗೆ ಗಾಯಗಳಾಗಿದ್ದು, ತಕ್ಷಣ ಸ್ಥಳೀಯರು ಅವರನ್ನು ಉಪಚರಿಸಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಿ ಸಿ ರೋಡಿನ ಸೋಮಯಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ಸ್ಕೂಟರ್ ಸವಾರಗೆ ಹಿಟ್ ಆಂಡ್ ರನ್ ನಡೆಸಿದ ಬೈಕ್ ಸವಾರ Rating: 5 Reviewed By: karavali Times
Scroll to Top