ಬಂಟ್ವಾಳ, ಜನವರಿ 11, 2026 (ಕರಾವಳಿ ಟೈಮ್ಸ್) : ಖಾಸಗಿ ಬಸ್ಸು ಹಿಂಬದಿಯಿಂದ ಬಂದು ಕಾರಿಗೆ ಡಿಕ್ಕಿಯಾದ ಪರಿಣಾಮ ಕಾರು ಜಖಂಗೊಂಡಿದ್ದಲ್ಲದೆ ಚಾಲಕ ಗಾಯಗೊಂಡ ಘಟನೆ ಬಿ ಸಿ ರೋಡಿನಲ್ಲಿ ಶುಕ್ರವಾರ ಸಂಜೆ ವೇಳೆ ಸಂಭವಿಸಿದೆ.
ಮಾಣಿ ನಿವಾಸಿ ಉಮೇಶ ಎಂ ಶೆಟ್ಟಿ (57) ಅವರು ತಮ್ಮ ಕಾರನ್ನು ಚಲಾಯಿಸಿಕೊಂಡು ಕೈಕಂಬ ಕಡೆಯಿಂದ ಮಾಣಿ ಕಡೆಗೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಏಕಪಥ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಸಂಜೆ 5.30ರ ಸಮಯ ಬಿ ಸಿ ರೋಡಿಗೆ ತಲುಪಿದಾಗ ಹಿಂಬದಿಯಿಂದ ಮೊಹಮ್ಮದ್ ಮುಸ್ತಫಾ ಎಂಬವರು ಚಲಾಯಿಸಿಕೊಂಡು ಬಂದ ಖಾಸಗಿ ಬಸ್ಸು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಕಾರಿನ ಹಿಂಬದಿಯ ಡಿಕ್ಕಿ, ಬಂಪರ್, ಮಿರರ್ ಜಖಂಗೊಂಡಿದ್ದಲ್ಲದೆ ಚಾಲಕ ಉಮೇಶ್ ಶೆಟ್ಟಿ ಅವರ ಎದೆಗೆ ಗುದ್ದಿದ ನೋವುಂಟಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment