ಬಂಟ್ವಾಳ, ಜನವರಿ 11, 2026 (ಕರಾವಳಿ ಟೈಮ್ಸ್) : ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿ ತೂರಾಡುತ್ತಿದ್ದ ವ್ಯಕ್ತಿಯನ್ನು ಪೂಂಜಾಲಕಟ್ಟೆ ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಪಾಂಡವರಕಲ್ಲು ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಬಡಗಕಜೆಕಾರು ಗ್ರಾಮದ ಕೋಮಿನಡ್ಕ ನಿವಾಸಿ ಅಬ್ದುಲ್ ಕರೀಂ ಎಂಬವರ ಪುತ್ರ ಹೈದರ್ (30) ಎಂಬಾತನೇ ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ತೂರಾಡಿ ಪೊಲೀಸರ ವಶವಾದ ವ್ಯಕ್ತಿ. ಪೂಂಜಾಲಕಟ್ಟೆ ಪೊಲೀಸ್ ಠಾಣಾ ಪಿಎಸ್ಸೈ ರಾಜೇಶ್ ಕೆ ವಿ ಅವರು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಸಿಬ್ಬಂದಿಗಳೊಂದಿಗೆ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿರುವ ವೇಳೆ ಬೆಳಿಗ್ಗೆ 11.30 ಗಂಟೆಗೆ ಯುವಕನೋರ್ವ ಪಾಂಡವರಕಲ್ಲು ಎಂಬಲ್ಲಿ ತೂರಾಡಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಸ್ಥಳಕ್ಕೆ ತೆರಳಿದಾಗ ಆರೋಪಿ ಹೈದರ್ ರಸ್ತೆ ಬದಿಯಲ್ಲಿ ತೂರಾಡುತ್ತಿದ್ದು, ಆತನನ್ನು ವಿಚಾರಿಸಿದಾಗ ತಾನು ಮರದ ಕೂಲಿ ಕೆಲಸ ಮಾಡಿಕೊಂಡಿದ್ದು, ಸುಮಾರು 2 ವಾರದ ಹಿಂದೆ ಸಕಲೇಶಪುರ ಕಡೆಗೆ ಮರದ ಕೆಲಸಕ್ಕೆ ಹೋದ ಸಮಯ ನನಗೆ ಗಾಂಜಾ ತುಂಬಿದ ಬೀಡಿಯನ್ನು ಗುರುತು ಪರಿಚಯ ಇಲ್ಲದವನು ನೀಡಿದ್ದನ್ನು ಪಡೆದುಕೊಂಡು ನನ್ನಲ್ಲಿ ಇಟ್ಟುಕೊಂಡಿದ್ದೆನು. ನಾನು ಮಾದಕ ವಸ್ತುವಾದ ಗಾಂಜಾವನ್ನು ಬೀಡಿಯಲ್ಲಿ ತುಂಬಿಸಿ ಸೇದಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ನಂತರ ಆತನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ನಿಷೇಧಿತ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment