ಬಂಟ್ವಾಳ, ಜನವರಿ 05, 2026 (ಕರಾವಳಿ ಟೈಮ್ಸ್) : ಪೊಲೀಸರನ್ನು ಕಂಡು ಅಕ್ರಮ ದನ ಸಾಗಾಟ ನಡೆಸುತ್ತಿದ್ದ ಆರೋಪಿಗಳಿಬ್ಬರು ಜಾನುವಾರುಗಳನ್ನು ಕೆಳಗಿಳಿಸಿ ಪಿಕಪ್ ಸಹಿತ ಪರಾರಿಯಾದ ಘಟನೆ ಸಿದ್ದಕಟ್ಟೆ ಜಂಕ್ಷನ್ನಿನಲ್ಲಿ ಜ 4 ರಂದು ನಡೆದಿದೆ.
ಘಟನೆ ಸಂದರ್ಭ ಸ್ಥಳದಲ್ಲಿದ್ದ ತೇಜಸ್ ಎಂಬವರು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಾಹಿತಿಯಂತೆ ಪರಾರಿಯಾದ ಆರೋಪಿಗಳನ್ನು ರಾಘವೇಂದ್ರ ನಾಯ್ಕ ಹಾಗೂ ಯೋಗಿನಾಥ ಎಂದು ಗುರುತಿಸಲಾಗಿದೆ.
ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈ ಮಂಜುನಾಥ ಟಿ ಅವರು ಸಿಬ್ಬಂದಿಗಳ ಜೊತೆ ಡಿ 4 ರಂದು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಿದ್ದಕಟ್ಟೆ ಜಂಕ್ಷನಲ್ಲಿರುವ ಸಮಯ ಸಂಜೆ ಸುಮಾರು 7.50 ರ ವೇಳೆಗೆ ಕರ್ಪೆ ಗ್ರಾಮದಿಂದ ಹಳದಿ ಬಣ್ಣದ ಪಿಕಪ್ ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಮಂಗಳೂರು ಕಡೆಗೆ ಕರ್ಪೆದೋಟ-ನೆಕ್ಲಾಜೆ-ಕುಪ್ಪೆಪದವು ಮಾರ್ಗವಾಗಿ ಅಕ್ರಮ ದನ ಸಾಗಾಟ ಮಾಡುವುದಾಗಿ ಬಂದ ಖಚಿತ ಮಾಹಿತಿಯಾಧಾರದಲ್ಲಿ ಕರ್ಪೆ ಕಡೆಯಿಂದ ಹೊಗುತ್ತಿದ್ದ ಕೆಎ18 ಬಿ2680 ನೋಂದಣಿ ಸಂಖ್ಯೆಯ ಪಿಕಪ್ ವಾಹನವನ್ನು ಚಾಲಕ ರಸ್ತೆ ಬದಿ ನಿಲ್ಲಿಸಿದ್ದಾನೆ. ವಾಹನದಲ್ಲಿ ಚಾಲಕ ಹಾಗೂ ಇನ್ನೋರ್ವ ವ್ಯಕ್ತಿ ಇಬ್ಬರು ಕೆಳಗೆ ಇಳಿದು ವಾಹನದಲ್ಲಿದ್ದ 3 ಗಂಡು ಕರುಗಳನ್ನು ಮತ್ತು 1 ಹಸುವನ್ನು ಕೆಳಗಡೆ ಎಳೆದು ಹಾಕಿ ಪಿಕಪ್ ವಾಹನ ಸಹಿತ ಪರಾರಿಯಾಗಿದ್ದಾರೆ. ಪೊಲೀಸರು ವಾಹನವನ್ನು ಹಿಂಬಾಲಿಸಿದರೂ ಅವರು ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾರೆ. ಅಲ್ಲಿಂದ ಪೊಲೀಸರು ಜಾನುವಾರು ಬಿಟ್ಟು ಹೋದ ಸ್ಥಳಕ್ಕೆ ಬಂದಾಗ ಸ್ಥಳದಲ್ಲಿದ್ದ ತೇಜಸ್ ಎಂಬವರು ಜಾನುವಾರುಗಳ ಬಗ್ಗೆ ಪೊಲೀಸರಿಗೆ ವಿವರಿಸಿದ್ವು, ಆರೋಪಿಗಳಾದ ರಾಘವೆಂದ್ರ ನಾಯ್ಕ ಹಾಗೂ ಯೋಗಿನಾಥ ಎಂಬವರು ಪೊಲೀಸರನ್ನು ಕಂಡು ದನ-ಕರುಗಳನ್ನು ಪಿಕಪ್ ವಾಹನದಿಂದ ಎಳೆದು ಕೆಳಗೆ ಹಾಕಿ ವಾಹನದೊಂದಿಗೆ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















0 comments:
Post a Comment