ಬಂಟ್ವಾಳ, ಜನವರಿ 05, 2026 (ಕರಾವಳಿ ಟೈಮ್ಸ್) : ಪೆಟ್ರೋಲ್ ಪಂಪಿನಲ್ಲಿರುವ ಶೌಚಾಲಯಕ್ಕೆಂದು ತೆರಳಿದ ಅಪರಿಚಿತ ವ್ಯಕ್ತಿಯೋರ್ವ ಬಿದ್ದು ಮೃತಪಟ್ಟ ಘಟನೆ ಮೆಲ್ಕಾರ್ ಕೆ ವಿ ಶೆಣೈ ಪೆಟ್ರೋಲ್ ಪಂಪಿನಲ್ಲಿ ಸಂಭವಿಸಿದೆ.
ಮೆಲ್ಕಾರಿನಲ್ಲಿರುವ ಪ್ರಕಾಶ್ ಶೆಣೈ ಎಂಬವರಿಗೆ ಸೇರಿದ ಪೆಟ್ರೋಲ್ ಪಂಪಿನಲ್ಲಿ ಈ ಘಟನೆ ನಡೆದಿದೆ. ಪೆಟ್ರೋಲ್ ಪಂಪಿಗೆ ಬಂದ ಅಪರಿಚಿತ ವ್ಯಕ್ತಿಯೋರ್ವ ಶೌಚಾಲಯದ ಬಗ್ಗೆ ಕೇಳಿದ್ದು, ಪಂಪಿನ ಸಿಬ್ಬಂದಿಗಳು ಶೌಚಾಲಯ ಹಿಂಭಾಗದಲ್ಲಿದೆ ಎಂದು ಹೇಳಿದ್ದಾರೆ. ಅಲ್ಲಿಗೆ ತೆರಳಿದ್ದ ಅಪರಿಚಿತ ಪಂಪಿನ ಹಿಂಭಾಗದಲ್ಲಿದ್ದ ಇಲೆಕ್ಟ್ರಿಕ್ ಕೊಠಡಿ ಬಳಿ ಅಂಗಾತ ಬಿದ್ದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಅಪರಿಚತ ವ್ಯಕ್ತಿ ಒಂದು ವಾರದ ಹಿಂದೆ ಎಲ್ಲಿಂದಲೋ ಬಂದವನು ಮೆಲ್ಕಾರ್ ಪೇಟೆಯಲ್ಲಿ ತಿರುಗಾಡುತ್ತಿದ್ದ ಎನ್ನಲಾಗಿದ್ದು, ಈತ ಅನಾರೋಗ್ಯ ಅಥವಾ ಮದ್ಯಪಾನ ಸೇವನೆ ಮಾಡಿಯೋ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಪೆಟ್ರೋಲ್ ಪಂಪ್ ಮ್ಯಾನೇಜರ್ ದಾಮೋದÀರ ಎಂ (70) ಎಂಬವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.


















0 comments:
Post a Comment