ಮಂಗಳೂರು, ಜನವರಿ 08, 2026 (ಕರಾವಳಿ ಟೈಮ್ಸ್) : ಡಿಜಿಟಲ್ ಇ-ಸ್ಟ್ಯಾಂಪ್ ತರಬೇತಿಯನ್ನು ಜಿಲ್ಲಾದ್ಯಂತ ಆಯಾಯ ಉಪನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಜನವರಿ 9 ರಂದು ಮಧ್ಯಾಹ್ನ 12 ಗಂಟೆಗೆ ಪುತ್ತೂರು ಉಪನೋಂದಣಿ ಕಛೇರಿ ಮತ್ತು ಸಂಜೆ 4 ಗಂಟೆಗೆ ಸುಳ್ಯ ಉಪನೋಂದಣಿ ಕಛೇರಿಯಲ್ಲಿ, ಜನವರಿ 10 ರಂದು ಮಧ್ಯಾಹ್ನ 12 ಗಂಟೆಗೆ ಮಂಗಳೂರು ನಗರ ಕೇಂದ್ರೀಯ ಉಪನೋಂದಣಿ ಕಛೇರಿ ಮತ್ತು ಮಧ್ಯಾಹ್ನ 12 ಗಂಟೆಗೆ ಮಂಗಳೂರು ತಾಲ್ಲೂಕು ಉಪನೋಂದಣಿ ಕಛೇರಿಯಲ್ಲಿ, ಜನವರಿ 12 ರಂದು ಮಧ್ಯಾಹ್ನ 12 ಗಂಟೆಗೆ ಬೆಳ್ತಂಗಡಿ ಉಪನೋಂದಣಿ ಕಛೇರಿ ಮತ್ತು ಸಂಜೆ 4 ಗಂಟೆಗೆ ಬಂಟ್ವಾಳ ಉಪನೋಂದಣಿ ಕಛೇರಿ ಮತ್ತು ವಿಟ್ಲ ಉಪನೋಂದಣಿ ಕಛೇರಿಯಲ್ಲಿ, ಜನವರಿ 13 ರಂದು ಮಧ್ಯಾಹ್ನ 12 ಗಂಟೆಗೆ ಮುಲ್ಕಿ ಉಪನೋಂದಣಿ ಕಛೇರಿ ಮತ್ತು ಸಂಜೆ 4 ಗಂಟೆಗೆ ಮೂಡಬಿದ್ರೆ ಉಪನೋಂದಣಿ ಕಛೇರಿಯಲ್ಲಿ ನಡೆಯಲಿದೆ.
ದಸ್ತಾವೇಜು ಬರಹಗಾರರು, ವಕೀಲರು ಕರ್ನಾಟಕ ಒನ್, ಮಂಗಳೂರು ಒನ್, ಗ್ರಾಮ ಒನ್, ಮತ್ತು ಬಾಪೂಜಿ ಸೇವಾ ಕೇಂದ್ರ ಹಾಗೂ ಎಸ್ ಸಿ ಎಚ್ ಐ ಎಲ್ ಎಲ್ ಮೂಲಕ ವಿತರಿಸುತ್ತಿರುವ ಇ-ಸ್ಟ್ಯಾಂಪ್ ಮಾರಾಟ ವ್ಯವಸ್ಥೆಯನ್ನು ನಿರ್ವಹಿಸುತ್ತಿರುವ ಸಹಕಾರಿ ಸೌಹಾರ್ದಗಳ ಸಿಬ್ಬಂದಿ ವರ್ಗದವರು ಈ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಬಹುದು ಹಾಗೂ ತರಬೇತಿ ಪಡೆಯುವ ಸ್ಥಳದ ಬಗ್ಗೆ ಉಪನೋಂದಣಿ ಅಧಿಕಾರಿಯವರಲ್ಲಿ ವಿಚಾರಿಸಿ ತರಬೇತಿಗೆ ಹಾಜರಾಗಬಹುದು ಎಂದು ದ.ಕ ಜಿಲ್ಲಾ ನೋಂದಣಾಧಿಕಾರಿಗಳು ತಿಳಿಸಿದ್ದಾರೆ.




















0 comments:
Post a Comment