ಬಂಟ್ವಾಳ, ಜನವರಿ 09, 2026 (ಕರಾವಳಿ ಟೈಮ್ಸ್) : ಟ್ರಾನ್ಸ್ ಫಾರ್ಮರ್ ಮೇಲೆ ಹತ್ತಿ ವಿದ್ಯುತ್ ತಂತಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ.
ಮೃತರನ್ನು ಸಜಿಪನಡು ಗ್ರಾಮದ ನಿವಾಸಿ ಎಸ್ ಕೆ ಅಬ್ದುಲ್ ರಹಿಮಾನ್ ಎಂದು ಹೆಸರಿಸಲಾಗಿದೆ. ಇವರು ಡಿ 5 ರಂದು ಸಜಿಪನಡು ಗ್ರಾಮದ ಕಂಚಿನ ಕೊದಂಟಿ ರಸ್ತೆಯ ಬದಿಯಲ್ಲಿರುವ ಟ್ರಾನ್ ಫಾರ್ಮರ್ ಮೇಲೆ ಹತ್ತಿ ವಿದ್ಯುತ್ ತಂತಿಯ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಕೆಳಗೆ ಬಿದ್ದು ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಡಿ 8 ರಂದು ಬೆಳಿಗ್ಗೆ 11.145ರ ವೇಳೆಗೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೃತ ಪುತ್ರ ಯೂಸುಫ್ ಅಸೀನ್ (22) ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.





















0 comments:
Post a Comment