ಮಂಗಳೂರು, ಜನವರಿ 09, 2026 (ಕರಾವಳಿ ಟೈಮ್ಸ್) : ಜಿಲ್ಲಾ ಖಜಾನೆ ಮಂಗಳೂರು ಕಛೇರಿಯು ಹಳೆಯ ಜಿಲ್ಲಾಧಿಕಾರಿ ಕಟ್ಟಡದಿಂದ ಪಡೀಲ್ ನೂತನ ಪ್ರಜಾ ಸೌಧ ಕಟ್ಟಡದ ನೆಲ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 16ಕ್ಕೆ ಸ್ಥಳಾಂತರಗೊಳ್ಳುತ್ತಿದ್ದು, ಜನವರಿ 12 ರಿಂದ ಜಿಲ್ಲಾ ಖಜಾನೆಯು ನೂತನ ಪ್ರಜಾ ಸೌಧ ಕಟ್ಟಡದಲ್ಲಿ ಕಾರ್ಯಾರಂಭ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಖಜಾನೆ ಉಪ ನಿರ್ದೇಶಕರ ಕಛೇರಿ ದೂರವಾಣಿ ಸಂಖ್ಯೆ 9481247091, 0824-2220575) ಸಂಪರ್ಕಿಸಬಹುದು ಎಂದು ಜಿಲ್ಲಾ ಖಜಾನೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





















0 comments:
Post a Comment