ಅಕ್ರಮ ಮಾಂಸ ಸಾಗಾಟ ಪ್ರಕರಣದ ಹಿನ್ನಲೆಯಲ್ಲಿ ಇನ್ಸ್ಟಾಗ್ರಾಮಿನಲ್ಲಿ ಪ್ರಚೋದನಕಾರಿ ಸಂದೇಶ : ಬಜ್ಪೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ದಾಖಲು - Karavali Times ಅಕ್ರಮ ಮಾಂಸ ಸಾಗಾಟ ಪ್ರಕರಣದ ಹಿನ್ನಲೆಯಲ್ಲಿ ಇನ್ಸ್ಟಾಗ್ರಾಮಿನಲ್ಲಿ ಪ್ರಚೋದನಕಾರಿ ಸಂದೇಶ : ಬಜ್ಪೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ದಾಖಲು - Karavali Times

728x90

4 January 2026

ಅಕ್ರಮ ಮಾಂಸ ಸಾಗಾಟ ಪ್ರಕರಣದ ಹಿನ್ನಲೆಯಲ್ಲಿ ಇನ್ಸ್ಟಾಗ್ರಾಮಿನಲ್ಲಿ ಪ್ರಚೋದನಕಾರಿ ಸಂದೇಶ : ಬಜ್ಪೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ದಾಖಲು

ಮಂಗಳೂರು, ಜನವರಿ 04, 2026 (ಕರಾವಳಿ ಟೈಮ್ಸ್) : ಅಕ್ರಮ ದನದ ಮಾಂಸ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮಿನಲ್ಲಿ ಪ್ರಚೋದನಕಾರಿ ಸಂದೇಶ ಹರಡಿದ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಬಜಪೆ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 27 ರಂದು ನಾರ್ಲಪದವು ಎಂಬಲ್ಲಿ ಅಬ್ದುಲ್ ಸತ್ತಾರ್ ಎಂಬಾತನು ತನ್ನ ಮಗಳನ್ನು ಸ್ಕೂಟರಿನಲ್ಲಿ ಕೂರಿಸಿಕೊಂಡು ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಬಗ್ಗೆ ಮತ್ತು ಅಬ್ದುಲ್ ಸತ್ತಾರ್ ಅವರನ್ನು ಸುಮೀತ್ ಮತ್ತು ಎಂ ರಜತ್ ನಾಯಕ್ ಎಂಬವರು ತಡೆದು ನಿಲ್ಲಿಸಿ ಹಲ್ಲೆ  ಮಾಡಿದ ಬಗ್ಗೆ ಬಜಪೆ ಪೆÇಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿ ತಖೆಯಲ್ಲಿರುತ್ತವೆ.

ಸದ್ರಿ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮಿನ ಮುಸ್ಲಿಂ_ಲೀಡರ್   ಎಂಬ  ಪೇಜಿನಲ್ಲಿ ಇಬ್ಬರು ಯುವಕರ ಪೆÇೀಟೋವನ್ನು ಹಾಕಿ “ಮಿತಿ ಮೀರುತ್ತಿರುವ ಸಂಘಿಗಳ ಅಟ್ಟಹಾಸ. ಇದಕ್ಕೆ ಕಡಿವಾಣ ಇಲ್ಲವಾಯಿತೆ? ಸಂಘಪರಿವಾರದ ಭಯೋತ್ಪಾದಕರ ದಾಳಿ ಈಗೀಗ ಹೆಚ್ಚುತ್ತಲೇ ಇದೆ, ಅವರಿಗೆ ಕಾನೂನಿನ ಭಯವಿಲ್ಲ ಕಾನೂನು ಅವರನ್ನು ಏನು ಮಾಡುವುದಿಲ್ಲ ಅವರನ್ನು ಕೇಳುವವರು ಇಲ್ಲ ಹೇಳುವವರಿಲ್ಲ ಎಂಬ ಧೈರ್ಯ ಅವರಿಗಿದೆ ನಾವು ಆಡಿದ್ದೇ ಆಟ ಎಂಬಾತಾಗಿದೆ. ಇನ್ನು ಗೋಮಾಂಸ ತಿನ್ನುತ್ತೇವೆ ಸಂಘಿಗಳೇ ಏನು ಮಾಡುತ್ತೀರ ಥೂ ನಿಮ್ಮ ಜನ್ಮಕ್ಕೆ, ಹದಿಹರೆಯದ ಮಕ್ಕಳನ್ನು ಕೂಡ ನೀವು ನೋಡುವುದಿಲ್ಲ ನಿಮ್ಮ ಮನೆಯಲ್ಲಿ ಮಕ್ಕಳು ಇಲ್ಲವೇ ಸರ್ಕಾರ ಆದಷ್ಟು ಬೇಗ ಈ ನಾಯಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಗಂಜಿಮಠ ವ್ಯಾಪ್ತಿಯ ನಾರ್ಳಪದವು ಎಂಬಲ್ಲಿ ಒಡ್ಡೂರಿನ ಪ್ರದೀಪ್, ರಜಿತ್, ಸಂತೋಷ್, ಹಾಗೂ ಜನಾರ್ಧನ ಎಂಬ ಸಂಘಿ ಗೂಂಡಾಗಳಿಂದ ಮೂಲ್ಲರಪಟ್ಟಣದ ಅಮಾಯಕ ಮುಸ್ಲಿಂ ತಂದೆ ಮತ್ತು ಮಗಳ ಮೇಲೆ ಮಾರಣಾಂತಿಕ ಹಲ್ಲೆ” ಮುಸ್ಲಿಂ_ಲೀಡರ್ ಎಂದು ಟೈಪ್ ಮಾಡಿ ಪೆÇೀಸ್ಟ್ ಮಾಡಿರುವುದು ಅಲ್ಲದೆ iಟಿsಣg4ಚಿmಚಿ ಎಂಬ ಇನಸ್ಟಾಗ್ರಾಂ ಐಡಿಯಿಂದ ಸದ್ರಿ ಪೆÇೀಸ್ಟಿಗೆ “ಇವರಿಗೆ ಸುಹಾಸ್ ಶೆಟ್ಟಿ ಟ್ರೀಟ್ ಮೆಂಟ್ ಕೊಡಬೇಕು ಸದ್ಯದಲ್ಲಿ” ಎಂದು ಕಾಮೆಂಟ್ ಮಾಡಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ವರ್ಗ ವರ್ಗಗಳನ್ನು ಮತ್ತು ಸಮುದಾಯವನ್ನು ಪ್ರಚೋದಿಸುವಂತೆ ಉದ್ದೇಶ ಪೂರ್ವಕವಾಗಿ ಪೆÇೀಸ್ಟ್ ಮಾಡಿರುವ ಹಾಗೂ ಸದ್ರಿ ಪೆÇೀಸ್ಟಿಗೆ ಸುಹಾಸ್ ಶೆಟ್ಟಿ ಅವರನ್ನು ಕೊಂದ ರೀತಿಯಲ್ಲಿ ಸದ್ಯದಲ್ಲಿ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿ ಕಮೆಂಟ್ ಮಾಡಿರುವವರ ವಿರುದ್ದ ಬಜ್ಪೆ ಪೆÇಲೀಸರು ಮೊಕದ್ದಮೆ ಸಂಖ್ಯೆ 07/2026 ಕಲಂ 351(2), 351( 3), 352, 353(2),192 ಬಿ ಎನ್ ಎಸ್-2023 ರಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡಿರುವ ಪೊಲೀಸರು ಶೀಘ್ರದಲ್ಲೆ ಆರೋಪಿಗಳನ್ನು ಪತ್ತೆ ಮಾಡಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ಮಾಂಸ ಸಾಗಾಟ ಪ್ರಕರಣದ ಹಿನ್ನಲೆಯಲ್ಲಿ ಇನ್ಸ್ಟಾಗ್ರಾಮಿನಲ್ಲಿ ಪ್ರಚೋದನಕಾರಿ ಸಂದೇಶ : ಬಜ್ಪೆ ಪೊಲೀಸ್ ಠಾಣೆಯಲ್ಲಿ ಸುಮೋಟೋ ದಾಖಲು Rating: 5 Reviewed By: karavali Times
Scroll to Top