ಮಂಗಳೂರು, ಉಡುಪಿ, ಕುಂದಾಪುರದಿಂದ ಬೆಂಗಳೂರಿಗೆ ಪ್ರಯಾಣ ದರ ಕಡಿತಗೊಳಿಸಿದ ಕೆ.ಎಸ್.ಆರ್.ಟಿ.ಸಿ. - Karavali Times ಮಂಗಳೂರು, ಉಡುಪಿ, ಕುಂದಾಪುರದಿಂದ ಬೆಂಗಳೂರಿಗೆ ಪ್ರಯಾಣ ದರ ಕಡಿತಗೊಳಿಸಿದ ಕೆ.ಎಸ್.ಆರ್.ಟಿ.ಸಿ. - Karavali Times

728x90

3 January 2026

ಮಂಗಳೂರು, ಉಡುಪಿ, ಕುಂದಾಪುರದಿಂದ ಬೆಂಗಳೂರಿಗೆ ಪ್ರಯಾಣ ದರ ಕಡಿತಗೊಳಿಸಿದ ಕೆ.ಎಸ್.ಆರ್.ಟಿ.ಸಿ.

 ಮಂಗಳೂರು, ಜನವರಿ 03, 2026 (ಕರಾವಳಿ ಟೈಮ್ಸ್) : ಮಂಗಳೂರು ವಿಭಾಗದಿಂದ ಕೆ.ಎಸ್.ಆರ್.ಟಿ.ಸಿ ನಿಗಮದ ಕುಂದಾಪುರ/ ಉಡುಪಿ/ ಮಂಗಳೂರಿನಿಂದ ಬೆಂಗಳೂರಿಗೆ ಕಾರ್ಯಾಚರಿಸುವ ವಿವಿಧ ಮಾದರಿಯ ಪ್ರತಿಷ್ಠಿತ ಬಸ್ಸುಗಳಲ್ಲಿ  ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಶೇ. 10 ರಿಂದ ಶೇ 15ರವರೆಗೆ ಪ್ರಯಾಣ ದರಗಳನ್ನು ಕಡಿಮೆಗೊಳಿಸಲಾಗಿದ್ದು, ಜನವರಿ 5 ರಿಂದ ಜಾರಿಗೆ ಬರುವಂತೆ ನಿಗಮದ ಸಾರಿಗೆಗಳಲ್ಲಿ ವಿಧಿಸಲಾಗುತ್ತಿದೆ.

ಪ್ರಯಾಣದರದ ವಿವರ :

ಅಂಬಾರಿ ಉತ್ಸವ : ಕುಂದಾಪುರ-ಬೆಂಗಳೂರು ಹಾಗೂ ಬೆಂಗಳೂರು-ಕುಂದಾಪುರ ಪ್ರಯಾಣ ದರ (ಪ್ರತಿ ಪ್ರಯಾಣಿಕರಿಗೆ) - 1,510/- ರೂಪಾಯಿ, ಉಡುಪಿ-ಬೆಂಗಳೂರು ಹಾಗೂ  ಬೆಂಗಳೂರು-ಉಡುಪಿ 1,460/- ರೂಪಾಯಿ, ಮಂಗಳೂರು-ಬೆಂಗಳೂರು ಹಾಗೂ ಬೆಂಗಳೂರು-ಮಂಗಳೂರು 1,350/- ರೂಪಾಯಿ.

ಡ್ರೀಮ್ ಕ್ಲಾಸ್ : ಕುಂದಾಪುರ-ಬೆಂಗಳೂರು ಹಾಗೂ ಬೆಂಗಳೂರು-ಕುಂದಾಪುರ ಪ್ರಯಾಣ ದರ 1,350/- ರೂಪಾಯಿ, ಉಡುಪಿ-ಬೆಂಗಳೂರು ಹಾಗೂ ಬೆಂಗಳೂರು-ಉಡುಪಿ 1,300/-, ಮಂಗಳೂರು-ಬೆಂಗಳೂರು ಹಾಗೂ ಬೆಂಗಳೂರು-ಮಂಗಳೂರು 1,200/- ರೂಪಾಯಿ

ಮಲ್ಟಿ ಆಕ್ಸಿಲ್-2.0 : ಕುಂದಾಪುರ-ಬೆಂಗಳೂರು ಹಾಗೂ ಬೆಂಗಳೂರು ಪ್ರಯಾಣ ದರ 1,310/-, ಉಡುಪಿ-  ರೂಪಾಯಿ, ಬೆಂಗಳೂರು ಹಾಗೂ  ಬೆಂಗಳೂರು-ಉಡುಪಿ 1,250/- ರೂಪಾಯಿ, ಮಂಗಳೂರು-ಬೆಂಗಳೂರು ಹಾಗೂ ಬೆಂಗಳೂರು-ಮಂಗಳೂರು 1,150/- ರೂಪಾಯಿ.

ಮಲ್ಟಿ ಆಕ್ಸಿಲ್ : ಕುಂದಾಪುರ-ಬೆಂಗಳೂರು ಹಾಗೂ ಬೆಂಗಳೂರು ಪ್ರಯಾಣ ದರ 1,110/- ರೂಪಾಯಿ, 

ಉಡುಪಿ-ಬೆಂಗಳೂರು ಹಾಗೂ ಬೆಂಗಳೂರು-ಉಡುಪಿ 1,060/- ರೂಪಾಯಿ, ಮಂಗಳೂರು-ಬೆಂಗಳೂರು ಹಾಗೂ ಬೆಂಗಳೂರು-ಮಂಗಳೂರು 1,000/- ರೂಪಾಯಿ

ನಾನ್ ಎಸಿ ಸ್ಲೀಪರ್ : ಕುಂದಾಪುರ-ಬೆಂಗಳೂರು ಹಾಗೂ ಬೆಂಗಳೂರು ಪ್ರಯಾಣ ದರ 1,050/- ರೂಪಾಯಿ, ಉಡುಪಿ-ಬೆಂಗಳೂರು ಹಾಗೂ  ಬೆಂಗಳೂರು-ಉಡುಪಿ 1,000/- ರೂಪಾಯಿ, ಮಂಗಳೂರು-ಬೆಂಗಳೂರು ಹಾಗೂ ಬೆಂಗಳೂರು-ಮಂಗಳೂರು 900/- ರೂಪಾಯಿ.

ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ : ಕುಂದಾಪುರ-ಬೆಂಗಳೂರು ಹಾಗೂ ಬೆಂಗಳೂರು ಪ್ರಯಾಣ ದರ 1,100/- ರೂಪಾಯಿ, ಉಡುಪಿ-ಬೆಂಗಳೂರು ಹಾಗೂ  ಬೆಂಗಳೂರು-ಉಡುಪಿ 1,060/- ರೂಪಾಯಿ, ಮಂಗಳೂರು-ಬೆಂಗಳೂರು ಹಾಗೂ ಬೆಂಗಳೂರು-ಮಂಗಳೂರು 950/- ರೂಪಾಯಿ.

ರಾಜಹಂಸ : ಕುಂದಾಪುರ-ಬೆಂಗಳೂರು ಹಾಗೂ ಬೆಂಗಳೂರು ಪ್ರಯಾಣ ದರ 750 /- ರೂಪಾಯಿ, ಉಡುಪಿ-ಬೆಂಗಳೂರು ಹಾಗೂ ಬೆಂಗಳೂರು-ಉಡುಪಿ 700/- ರೂಪಾಯಿ, ಮಂಗಳೂರು-ಬೆಂಗಳೂರು ಹಾಗೂ ಬೆಂಗಳೂರು-ಮಂಗಳೂರು 650/- ರೂಪಾಯಿ.

ಸಾರಿಗೆಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಮಂಗಳೂರು ಕೆ.ಎಸ್.ಆರ್.ಟಿ.ಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು, ಉಡುಪಿ, ಕುಂದಾಪುರದಿಂದ ಬೆಂಗಳೂರಿಗೆ ಪ್ರಯಾಣ ದರ ಕಡಿತಗೊಳಿಸಿದ ಕೆ.ಎಸ್.ಆರ್.ಟಿ.ಸಿ. Rating: 5 Reviewed By: karavali Times
Scroll to Top