ಬೆಳ್ತಂಗಡಿ, ಜನವರಿ 04, 2026 (ಕರಾವಳಿ ಟೈಮ್ಸ್) : ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೆಳ್ತಂಗಡಿ ಪೊಲೀಸರು ಸುಮಾರು ಐದೂವರೆ ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ಸಹಿತ ಆರೋಪಿಯನ್ನು ಬಂಧಿಸಿದ ಘಟನೆ ಕುವೆಟ್ಟು ಗ್ರಾಮದ ಮದ್ದಡ್ಕ ಪೇಟೆ ಸಮೀಪದ ಎಂ ಎ ಕಾಂಪ್ಲೆಕ್ಸ್ ಬಳಿ ಜನವರಿ 3 ರಂದು ಸಂಜೆ ನಡೆದಿದೆ.
ಬಂಧಿತ ಆರೋಪಿಯನ್ನು ದೇರಳಕಟ್ಟೆ ಸಮೀಪದ ಕೋಟೆಕಾರು ನಿವಾಸಿ ಉಮ್ಮರ್ ಶರೀಫ್ (42) ಎಂದು ಹೆಸರಿಸಲಾಗಿದೆ. ಸಾರ್ವಜನಿಕ ರಸ್ತೆ ಬದಿಯಲ್ಲಿ ಬಿಳಿ ಬಣ್ಣದ ಕಾರಿನಲ್ಲಿ ಅನುಮಾನಸ್ಪದವಾಗಿ ಕುಳಿತಿದ್ದ ಆರೋಪಿ ಉಮ್ಮರ್ ಶರೀಪ್ ಎಂಬಾತನನ್ನು ವಿಚಾರಿಸಿದಾಗ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟಕ್ಕೆ ತಂದಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಈತನ ಅಂಗಶೋಧನೆ ನಡೆಸಿದಾಗ, 4 ಸಿಗರೇಟ್ ಪ್ಯಾಕೆಟ್‍ಗಳೊಳಗೆ 8 ಪ್ಲಾಸ್ಟಿಕ್ ಕವರ್‍ಗಳಲ್ಲಿ ಸುಮಾರು 5,54,800/- ರೂಪಾಯಿ ಮೌಲ್ಯದ 55.48 ಗ್ರಾಂ ತೂಕದ ಎಂಡಿಎಂಎ ಪತ್ತೆಯಾಗಿದೆ. ವಿಚಾರಣೆಯಲ್ಲಿ ಸದ್ರಿ ಮಾದಕ ವಸ್ತುವನ್ನು ಸುನ್ನತ್ ಕೆರೆ ನಿವಾಸಿ ನೌಷಾದ್ ಎಂಬಾತ ನೀಡಿರುವುದಾಗಿ ತಿಳಿಸಿರುತ್ತಾನೆ. ನಿಷೇಧಿತ ಮಾದಕ ವಸ್ತು ಸಾಗಾಟ ಹಾಗೂ ಮಾರಾಟಕ್ಕೆ ಬಳಸಿದ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಕೆಎ-19 ಎಂಜಿ-4669 ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















0 comments:
Post a Comment