ಕರಾವಳಿ ಉತ್ಸವ ಪ್ರಯುಕ್ತ ಜನವರಿ 30 ರಿಂದ ಫೆಬ್ರವರಿ 1 ರವರೆಗೆ ಕದ್ರಿ ಪಾರ್ಕಿನಲ್ಲಿ ಆಹಾರ ಮೇಳ - Karavali Times ಕರಾವಳಿ ಉತ್ಸವ ಪ್ರಯುಕ್ತ ಜನವರಿ 30 ರಿಂದ ಫೆಬ್ರವರಿ 1 ರವರೆಗೆ ಕದ್ರಿ ಪಾರ್ಕಿನಲ್ಲಿ ಆಹಾರ ಮೇಳ - Karavali Times

728x90

23 January 2026

ಕರಾವಳಿ ಉತ್ಸವ ಪ್ರಯುಕ್ತ ಜನವರಿ 30 ರಿಂದ ಫೆಬ್ರವರಿ 1 ರವರೆಗೆ ಕದ್ರಿ ಪಾರ್ಕಿನಲ್ಲಿ ಆಹಾರ ಮೇಳ

ಮಂಗಳೂರು, ಜನವರಿ 23, 2026 (ಕರಾವಳಿ ಟೈಮ್ಸ್) : ಕರಾವಳಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಆಹಾರ ಮೇಳವು ಜನವರಿ 30ರಿಂದ ಫೆಬ್ರವರಿ 1ರವರೆಗೆ ಮಂಗಳೂರು ನಗರದ ಕದ್ರಿ ಪಾರ್ಕಿನಲ್ಲಿ ನಡೆಯಲಿದೆ. 

ಆಹಾರ ಮೇಳದಲ್ಲಿ ಕರಾವಳಿ ಪ್ರದೇಶದ ವೈವಿಧ್ಯಮಯ ಹಾಗೂ ಸಮೃದ್ಧ ಪಾಕ ಪರಂಪರೆಯನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದ್ದು, ಸ್ಥಳೀಯ ಹಾಗೂ ಸಾಂಪ್ರದಾಯಿಕ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆ ಕಲ್ಪಿಸಲಿದೆ. ಆಹಾರಪ್ರಿಯ ನಾಗರಿಕರಿಗೆ ವಿಶೇಷ ಅನುಭವವನ್ನು ನೀಡುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಉತ್ಸವದಲ್ಲಿ ಎಲ್ಲ ವರ್ಗದ ಜನರಿಗೆ ರುಚಿಕರ ಹಾಗೂ ವೈವಿಧ್ಯಮಯ ತಿನಿಸುಗಳು ಲಭ್ಯವಿರಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9449035570, 9243388835 ಸಂಪರ್ಕಿಸಬಹುದು ಎಂದು ಸ್ಟ್ರೀಟ್ ಫುಡ್ ಫೆಸ್ಟಿವಲ್ ಸಮಿತಿ ಅಧ್ಯಕ್ಷರು ಹಾಗೂ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಕರಾವಳಿ ಉತ್ಸವ ಪ್ರಯುಕ್ತ ಜನವರಿ 30 ರಿಂದ ಫೆಬ್ರವರಿ 1 ರವರೆಗೆ ಕದ್ರಿ ಪಾರ್ಕಿನಲ್ಲಿ ಆಹಾರ ಮೇಳ Rating: 5 Reviewed By: karavali Times
Scroll to Top