ಬೆಳ್ತಂಗಡಿ : ಬೈಕ್ ಕಳ್ಳತನಕ್ಕೆ ಯತ್ನಿಸಿದ ಖದೀಮರನ್ನು ಹಿಡಿದು ಹಲ್ಲೆ ನಡೆಸಿ ಪೊಲೀಸರಿಗೊಪ್ಪಿಸಿದ ಸ್ಥಳೀಯರು : ಹಲ್ಲೆಗೊಳಗಾದ ಆರೋಪಿಗಳಿಂದ ಪ್ರತಿದೂರು - Karavali Times ಬೆಳ್ತಂಗಡಿ : ಬೈಕ್ ಕಳ್ಳತನಕ್ಕೆ ಯತ್ನಿಸಿದ ಖದೀಮರನ್ನು ಹಿಡಿದು ಹಲ್ಲೆ ನಡೆಸಿ ಪೊಲೀಸರಿಗೊಪ್ಪಿಸಿದ ಸ್ಥಳೀಯರು : ಹಲ್ಲೆಗೊಳಗಾದ ಆರೋಪಿಗಳಿಂದ ಪ್ರತಿದೂರು - Karavali Times

728x90

23 January 2026

ಬೆಳ್ತಂಗಡಿ : ಬೈಕ್ ಕಳ್ಳತನಕ್ಕೆ ಯತ್ನಿಸಿದ ಖದೀಮರನ್ನು ಹಿಡಿದು ಹಲ್ಲೆ ನಡೆಸಿ ಪೊಲೀಸರಿಗೊಪ್ಪಿಸಿದ ಸ್ಥಳೀಯರು : ಹಲ್ಲೆಗೊಳಗಾದ ಆರೋಪಿಗಳಿಂದ ಪ್ರತಿದೂರು

ಬೆಳ್ತಂಗಡಿ, ಜನವರಿ 23, 2026 (ಕರಾವಳಿ ಟೈಮ್ಸ್) : ಬೈಕ್ ಕಳವುಗೈಯಲು ಯತ್ನಿಸಿದ ಆರೋಪಿಗಳಿಬ್ಬರನ್ನು ಹಿಡಿದ ಸ್ಥಳೀಯರು ಹಲ್ಲೆ ನಡೆಸಿ ಪೊಲೀಸರಿಗೊಪ್ಪಿಸಿದ ಘಟನೆ ಮರೋಡಿ ಗ್ರಾಮದ ಪಳಾರಗೋಳಿ ಎಂಬಲ್ಲಿ ಜನವರಿ 20 ರಂದು ರಾತ್ರಿ ಸಂಭವಿಸಿದೆ. 

ಆರೋಪಿಗಳನ್ನು ಕೂಳೂರು ನಿವಾಸಿಗಳಾದ ಮೊಯಿದಿನ್ ನಾಸಿರ್ ಹಾಗೂ ಅಬ್ದುಲ್ ಸಮದ್ ಎಂದು ಹೆಸರಿಸಲಾಗಿದೆ. ಜನವರಿ 20 ರಂದು ಬೆಳಗ್ಗಿನ ಜಾವ 2.10 ರಿಂದ 2.30 ರ ಅವಧಿಯಲ್ಲಿ ಇಲ್ಲಿನ ನಿವಾಸಿ ದೇವಿಪ್ರಸಾದ್ (22) ಎಂಬವರ ಮನೆ ಬಳಿ ಆರೋಪಿಗಳು ಬೈಕ್ ಕಳವು ಮಾಡಿಕೊಂಡು ಹೋಗಲು ಯತ್ನಿಸುತ್ತಿದ್ದು, ತಡೆಯುವ ವೇಳೆ ಹಲ್ಲೆ ನಡೆಸಿ ಬೈಕಿನೊಂದಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ದೇವಿಪ್ರಸಾದ್ ಅವರು ನೀಡಿದ ದೂರಿನಂತೆ ವೇಣೂರು ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 02/2026 ಕಲಂ 303(2), 307 ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇದೇ ಘಟನೆಗೆ ಸಂಬಂದಿಸಿದಂತೆ ರಸ್ತೆ ಬದಿಯಲ್ಲಿದ್ದ ಬೈಕ್ ತೆಗೆದುಕೊಂಡು ಹೋಗುವ ಸಮಯ ಸುಮಾರು 25-30 ಜನ ಅಕ್ರಮ ಕೂಟ ಸೇರಿ ಸುತ್ತುವರಿದು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಾಗೂ ಮರದ ಕೋಲಿನಿಂದ ಹಲ್ಲೆ ನಡೆಸಿ, ಮರಕ್ಕೆ ಕಟ್ಟಿಹಾಕಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಬೆಂಗ್ರೆ ಕೂಳೂರು ನಿವಾಸಿ ಅಬ್ದುಲ್ ಸಮದ್ (29) ಅವರು ನೀಡಿದ ದೂರಿನಂತೆ ವೇಣೂರು ಪೆÇಲೀಸ್  ಠಾಣೆಯಲ್ಲಿ ಅಪರಾಧ ಕ್ರಮಾಂಕ 03/2026 ಕಲಂ ಕಲಂ 189(2), 191(2), 191(3), 352, 115(2), 118(1), 351(2) ಜೊತೆಗೆ 190 ಬಿ ಎನ್ ಎಸ್-2023 ಪ್ರಕಾರ ಪ್ರಕರಣ ದಾಖಲಾಗಿದೆ. ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬೆಳ್ತಂಗಡಿ : ಬೈಕ್ ಕಳ್ಳತನಕ್ಕೆ ಯತ್ನಿಸಿದ ಖದೀಮರನ್ನು ಹಿಡಿದು ಹಲ್ಲೆ ನಡೆಸಿ ಪೊಲೀಸರಿಗೊಪ್ಪಿಸಿದ ಸ್ಥಳೀಯರು : ಹಲ್ಲೆಗೊಳಗಾದ ಆರೋಪಿಗಳಿಂದ ಪ್ರತಿದೂರು Rating: 5 Reviewed By: karavali Times
Scroll to Top