ಕೊಡಿಯಾಲ್ ಗುತ್ತು ವೆಟ್ ವೆಲ್ ಕೊಳಚೆ ನೀರು ತೋಡುಗಳಲ್ಲಿ ಹರಿಯುವ ಸ್ಥಳಕ್ಕೆ ಐವನ್ ಭೇಟಿ, ಪರಿಶೀಲನೆ - Karavali Times ಕೊಡಿಯಾಲ್ ಗುತ್ತು ವೆಟ್ ವೆಲ್ ಕೊಳಚೆ ನೀರು ತೋಡುಗಳಲ್ಲಿ ಹರಿಯುವ ಸ್ಥಳಕ್ಕೆ ಐವನ್ ಭೇಟಿ, ಪರಿಶೀಲನೆ - Karavali Times

728x90

6 January 2026

ಕೊಡಿಯಾಲ್ ಗುತ್ತು ವೆಟ್ ವೆಲ್ ಕೊಳಚೆ ನೀರು ತೋಡುಗಳಲ್ಲಿ ಹರಿಯುವ ಸ್ಥಳಕ್ಕೆ ಐವನ್ ಭೇಟಿ, ಪರಿಶೀಲನೆ

ಮಂಗಳೂರು, ಜನವರಿ 06, 2026 (ಕರಾವಳಿ ಟೈಮ್ಸ್) : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೊಡಿಯಾಲ್ ಬೈಲ್ ವಾರ್ಡಿನಲ್ಲಿ ಕೊಡಿಯಾಲ್ ಗುತ್ತು ವೆಟ್ ವೆಲ್ ನಿಂದ ಕೊಳಚೆ ನೀರುನ್ನು ತೋಡುಗಳಿಲ್ಲಿ ಬಿಟ್ಟಿದ್ದು, ಸ್ಥಳೀಯ ಬಾವಿಗಳ ನೀರು ಕಲುಷಿತಗೊಂಡು ದುರ್ನಾತ ಬೀರುತ್ತಿದೆ. ಇಂತಹ ಬಾವಿಗಳ ನೀರನ್ನು ಉಪಯೋಗಿಸಿದಲ್ಲಿ ಸದ್ರಿ ಪ್ರದೇಶದ ವಾಸಿಗಳಿಗೆ ರೋಗ-ರುಜಿನಗಳು ಬರುವ ಸಾದ್ಯತೆ ಇದ್ದು, ಸ್ಥಳೀಯ ಮಾಜಿ ಕಾಫೆರ್Çೀರೇಟರ್ ಪ್ರಕಾಶ್ ಬಿ ಸಾಲ್ಯಾನ್ ಅವರ ಮನವಿ ಮೇರೆಗೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರದೇಶವಾಸಿಗಳ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ತಕ್ಷಣ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ಪ್ರದೇಶದಲ್ಲಿ ವೆಟ್ ವೆಲ್ ನಿಂದ ಬರುವಂತಹ  ಕೊಳಚೆ ನೀರು ಕುದ್ರೋಳಿ ವೆಟ್ ವೆಲ್ ಹೋಗಬೇಕಾಗಿದ್ದು, ಅಲ್ಲಿರುವ ಪೈಪುಗಳು ಹಳೆಯದಾಗಿರುವುದರಿಂದ ಸದ್ರಿ ಕೊಳಚೆ ನೀರು ಸಾರ್ವಜನಿಕ ತೋಡಿಗೆ ಬಿಟ್ಟಿರುವುದರಿಂದ ಪ್ರದೇಶವು ದುರ್ವಾಸನೆ ಬೀರುತ್ತಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ದೂರು ನೀಡಿದ್ದರು. ಅಲ್ಲದೇ ಬಾವಿಗಳ ನೀರು ಸೊಳ್ಳೆಗಳ ಕಾಟದಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುವುದರ ಜೊತೆಗೆ ತಕ್ಷಣ ಸಮಸ್ಯೆ ಪರಿಹರಿಸುವಂತೆ ಮನಪಾ ಆಯುಕ್ತರು ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.

ಈ ಬಗ್ಗೆ ಕ್ರಮವಹಿಸುವುದಾಗಿ ಮತ್ತು ಕೊಳಚೆ ನೀರನ್ನು ಪೈಪ್ ಮುಖಾಂತರ ಹರಿಯುವಂತೆ ಕ್ರಮಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು. ಮೂರು ಪೈಪುಗಳಿಗೆ 5 ಕೋಟಿ ರೂಪಾಯಿ ಪ್ರಸ್ತಾವನೆ ಸಲ್ಲಿಸಿದ್ದು, ತಕ್ಷಣ ಕಾಮಗಾರಿ ಕೈಗೊಳ್ಳುವುದಾಗಿ ಇಂಜಿನಿಯರ್ ಭರವಸೆ ನೀಡಿದ್ದಾರೆ ಎಂದು ಶಾಸಕ ಐವನ್ ಡಿಸೋಜಾ ತಿಳಿಸಿದ್ದಾರೆ. 

ಈ ಸಂದರ್ಭ ಪ್ರಕಾಶ್ ಬಿ ಸಾಲ್ಯಾನ್, ಅನಂತ್ ಕಾಮತ್, ಸಂಜಯ್ ಶೇಟ್, ರಘುರಾಜ್ ಕದ್ರಿ, ದಿನೇಶ್ ಬಲಿಪತೋಟ, ದೇವಿ ಪ್ರಸಾದ್ ಕದ್ರಿ, ಹರೀಶ್ ಕೊಡಿಯಾಲ್ ಬೈಲ್, ಕೇಶವ, ಉಮಾನಾಥ ಗುರಿಕಾರ, ರವಿ ಬಲಿಪತೋಟ, ಶೈಲೇಶ್ ಬಲಿಪತೋಟ, ಸುರೇಶ್ , ಧನಂಜಯ್, ಗಂಗಾಧರ್ ಮಾಸ್ಟರ್ ಮೊದಲಾದವರು ನಿಯೋಗದಲ್ಲಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಕೊಡಿಯಾಲ್ ಗುತ್ತು ವೆಟ್ ವೆಲ್ ಕೊಳಚೆ ನೀರು ತೋಡುಗಳಲ್ಲಿ ಹರಿಯುವ ಸ್ಥಳಕ್ಕೆ ಐವನ್ ಭೇಟಿ, ಪರಿಶೀಲನೆ Rating: 5 Reviewed By: karavali Times
Scroll to Top