ಬಂಟ್ವಾಳ, ಜನವರಿ 26, 2026 (ಕರಾವಳಿ ಟೈಮ್ಸ್) : ಸಜಿಪಮೂಡ ವಲಯ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಹೆಸರು ಮತ್ತು ಮೂಲ ಸ್ವರೂಪ ಬದಲಾವಣೆ ಮಾಡಿದ ವಿರುದ್ಧ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಸಜಿಪಮೂಡ ವಲಯ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಕಂದೂರು ಬಸ್ ತಂಗುದಾಣದಿಂದ ಪಂಚಾಯತ್ ಕಚೇರಿವರೆಗೆ ಪಾದಯಾತ್ರೆ ನಡೆಯಿತು. ಬಂಟ್ವಾಳ ಕೆಡಿಪಿ ಸದಸ್ಯ ಗಿರೀಶ್ ಕುಮಾರ್ ಪೆರ್ವ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.
ಬಂಟ್ವಾಳ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ತಾಲೂಕು ಮಾಜಿ ಉಪಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಪ್ರಮುಖರಾದ ಶ್ರೀಮತಿ ಪುಷ್ಪವಾತಿ, ಸಂಜೀವ ಪೂಜಾರಿ ಕುಚ್ಚಿಗುಡ್ಡೆ, ಶೋಭಾ ಶೆಟ್ಟಿ, ಶ್ರೀಮತಿ ಫೌಝಿಯಾ, ಐಡಾ ಸುರೇಶ್, ದೇವಿಪ್ರಸಾದ್ ಪೂಂಜಾ, ಪ್ರಭಾಕರ ಶೆಟ್ಟಿ ಕೊಳಕೆ, ಹಮೀದ್ ಕೊಳಕೆ, ಅಶೋಕ ಕೋಮಾಲಿ, ವಿಶ್ವನಾಥ ಕುಡೂರು, ವಿನೋದ್ ಕೋಮಾಲಿ, ಗಣಪ ಕೋಮಾಲಿ, ರೈಮಂಡ್ ಅಂದ್ರ್ರಾದೆ, ಅಬ್ದುಲ್ಲ ಕುಂಞÂ, ಅಶ್ರಫ್ ಜಾಡಕೋಡಿ, ಅಬೂಬಕ್ಕರ್ ಬೊಳ್ಳಾಯಿ, ತಿಲಕರ ಮಿತ್ತಮಜಲ್, ಯಮುನ ಪ್ರಮೀಳಾ, ಕರೀಂ ಬೊಳ್ಳಾಯಿ, ರಮೇಶ್ ಪಣೋಲಿಬೈಲ್, ರಝಾಕ್ ಬೊಳ್ಳಾಯಿ, ಮಲಿಕ್ ಕೊಳಕೆ, ನಿಯಾಝ್, ಆಲ್ವಿನ್ ಕೊಳಕೆ, ಅಬೂಬಕ್ಕರ್, ಅಶೋಕ ಕೊಳಕೆ, ಬೊಳ್ಳಾಯಿ, ಸಲ್ಮಾನ್ ಬೊಳ್ಳಾಯಿ, ಹನೀಫ್ ಬೊಳ್ಳಾಯಿ, ಸೀತಾರಾಮ್ ಶೆಟ್ಟಿ, ನಸೀರ್ ಬೊಳ್ಳಾಯಿ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.





























0 comments:
Post a Comment