ವಿಟ್ಲ ಕಸಬಾ ನಿವಾಸಿ ಶೌಕತ್ ಎಂಬಾತ ಮೂಡಿಗೆರೆಗೆ ಗಡೀಪಾರು - Karavali Times ವಿಟ್ಲ ಕಸಬಾ ನಿವಾಸಿ ಶೌಕತ್ ಎಂಬಾತ ಮೂಡಿಗೆರೆಗೆ ಗಡೀಪಾರು - Karavali Times

728x90

8 January 2026

ವಿಟ್ಲ ಕಸಬಾ ನಿವಾಸಿ ಶೌಕತ್ ಎಂಬಾತ ಮೂಡಿಗೆರೆಗೆ ಗಡೀಪಾರು

ಬಂಟ್ವಾಳ, ಜನವರಿ 08, 2026 (ಕರಾವಳಿ ಟೈಮ್ಸ್) : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ವಿಟ್ಲ ಕಸಬಾ ಗ್ರಾಮದ ನಿವಾಸಿ ಅಬ್ದುಲ್ ಖಾದರ್ ಅಲಿಯಾಸ್ ಶೌಕತ್ ಎಂಬಾತನ ಮೇಲೆ ಹಲ್ಲೆ, ದೊಂಬಿ, ನಿಷೇಧಿತ ಮಾದಕ ದ್ರವ್ಯ ಸೇವನೆ,  ಎನ್ ಡಿ ಪಿ ಎಸ್ ಕಾಯ್ದೆಯಂತೆ 3 ಪ್ರಕರಣಗಳು ದಾಖಲಾಗಿದ್ದು ಈತನನ್ನು ವಿಟ್ಲ ಪೊಲೀಸ್ ಠಾಣೆಯ ಠಾಣಾಧಿಕಾರಿಗಳ ವರದಿಯಂತೆ ಮಂಗಳೂರು ಸಹಾಯಕ ಆಯುಕ್ತರು ಹಾಗೂ ಉಪವಿಭಾಗಿಯ ದಂಡಾಧಿಕಾರಿ ಅವರು ದಕ್ಷಿಣ ಕನ್ನಡ ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿರುತ್ತಾರೆ. ಸದರಿ ಆದೇಶದಂತೆ ಜನವರಿ 8 ರಂದು ದಕ್ಷಿಣ ಕನ್ನಡ ಜಿಲ್ಲೆಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣೆಗೆ ಸುರಕ್ಷಿತವಾಗಿ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ವಿಟ್ಲ ಕಸಬಾ ನಿವಾಸಿ ಶೌಕತ್ ಎಂಬಾತ ಮೂಡಿಗೆರೆಗೆ ಗಡೀಪಾರು Rating: 5 Reviewed By: karavali Times
Scroll to Top