ಜನವರಿ 10 ರಂದು (ನಾಳೆ) ಮಂಗಳೂರಿನಲ್ಲಿ ಸಿಎಂ, ಡಿಸಿಎಂ ಸಹಿತ ಹಲವು ಗಣ್ಯರ ಪ್ರವಾಸ : ಪೊಲೀಸರಿಂದ ಸಾರ್ವಜನಿಕರಿಗೆ ಸಂಚಾರಿ ಸೂಚನೆಗಳು - Karavali Times ಜನವರಿ 10 ರಂದು (ನಾಳೆ) ಮಂಗಳೂರಿನಲ್ಲಿ ಸಿಎಂ, ಡಿಸಿಎಂ ಸಹಿತ ಹಲವು ಗಣ್ಯರ ಪ್ರವಾಸ : ಪೊಲೀಸರಿಂದ ಸಾರ್ವಜನಿಕರಿಗೆ ಸಂಚಾರಿ ಸೂಚನೆಗಳು - Karavali Times

728x90

9 January 2026

ಜನವರಿ 10 ರಂದು (ನಾಳೆ) ಮಂಗಳೂರಿನಲ್ಲಿ ಸಿಎಂ, ಡಿಸಿಎಂ ಸಹಿತ ಹಲವು ಗಣ್ಯರ ಪ್ರವಾಸ : ಪೊಲೀಸರಿಂದ ಸಾರ್ವಜನಿಕರಿಗೆ ಸಂಚಾರಿ ಸೂಚನೆಗಳು

 ಮಂಗಳೂರು, ಜನವರಿ 09, 2026 (ಕರಾವಳಿ ಟೈಮ್ಸ್) : ಜನವರಿ 10 ರಂದು ಶನಿವಾರ ಸಂಜೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಹಿತ ಹಲವು ಗಣ್ಯರು ಮಂಗಳೂರು ಅತ್ತಾವರದಲ್ಲಿರುವ ಹೋಟೆಲ್ ಅವಾತಾರ್ ನಲ್ಲಿ ನಡೆಯಲಿರುವ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಸಮಾವೇಶ, ಪಿಲಿಕುಲದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭ, ನರಿಂಗಾನ ಕಂಬಳೋತ್ಸವ ಹಾಗೂ ಅಂಬ್ಲಮೊಗರು ಉರೂಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಗಣ್ಯರು ಸಂಚರಿಸುವ ರಸ್ತೆಗಳಲ್ಲಿ ಸಾರ್ವಜನಿಕ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಬಹುದು.

ಸಾರ್ವಜನಿಕರು ಸುಗಮ ಸಂಚಾರ ದೃಷ್ಟಿಯಿಂದ ತುರ್ತು ಸಂದರ್ಭ ಹೊರತುಪಡಿಸಿ ಕೆಳಕಂಡ ಮಾರ್ಗದಲ್ಲಿ ಬಾರದೇ ಅದಷ್ಟು ಬದಲಿ ಮಾರ್ಗ ಉಪಯೋಗಿಸುವಂತೆ ಪೊಲೀಸ್ ಕಮಿಷನರ್ ಕೋರಿದ್ದಾರೆ. 


ಸಂಚಾರ ದಟ್ಟಣೆಯಾಗುವ ಮಾರ್ಗಗಳ ವಿವರ : 

ಕೆಂಜಾರು ಜಂಕ್ಷನ್-ಮರವೂರು-ಕಾವೂರು-ಬೋಂದೆಲ್-ಪದವಿನಂಗಡಿ-ಮೇರಿಹಿಲ್-ಯೆಯ್ಯಾಡಿ-ಕೆ.ಪಿ.ಟಿ. ವೃತ್ತ-ಬಟ್ಟಗುಡ್ಡೆ-ಕದ್ರಿ ಕಂಬಳ-ಭಾರತ್ ಬೀಡಿ ಜಂಕ್ಷನ್-ಬಂಟ್ಸ್ ಹಾಸ್ಟೆಲ್-ಪಿ.ವಿ.ಎಸ್-ನವಭಾರತ್ ವೃತ್ತ-ಡಾ ಅಂಬೇಡ್ಕರ್ ಜಂಕ್ಷನ್-ಹಂಪನಕಟ್ಟೆ-ಕೈರಳಿ ಜಂಕ್ಷನ್-ಅತ್ತಾವರ ಕಟ್ಟೆ-ಅವತಾರ್ ಹೋಟೆಲ್ ಎದುರಿನ ರಸ್ತೆ.

ಪದವು ಜಂಕ್ಷನ್-ನಂತೂರು ವೃತ್ತ-ಪಂಪ್ ವೆಲ್-ಎಕ್ಕೂರು-ಜಪ್ಪಿನಮೊಗರು-ಕಲ್ಲಾಪು-ತೊಕ್ಕೊಟ್ಟು-ಕುತ್ತಾರ್ ಪದವು-ದೇರಳಕಟ್ಟೆ-ನಾಟೆಕಲ್-ಮಂಗಳಾಂತಿ-ಕಲ್ಕಟ್ಟ-ಮಂಜನಾಡಿ-ನರಿಂಗಾನ.

ಕುತ್ತಾರ್ ಪದವು-ಕೊರಗಜ್ಜನಕಟ್ಟೆ-ಉಳಿಯ-ಅಂಬ್ಲಮೊಗರು-ಮದಕ ಜಂಕ್ಷನ್ 

ಕೆಪಿ.ಟಿ. ಜಂಕ್ಷನ್-ಕೊಟ್ಟಾರ ಚೌಕಿ-ಕೊಡಿಕಲ್ ಕ್ರಾಸ್-ಕೂಳೂರು-ಕೆ.ಐ.ಓ.ಸಿ.ಎಲ್ ಜಂಕ್ಷನ್-ತಣ್ಣೀರು ಬಾವಿ-ಬ್ಲೂಪ್ಲ್ಯಾಗ್ ಬೀಚ್

ಮೇಲೆ ತಿಳಿಸಿರುವ ಮಾರ್ಗದಲ್ಲಿ ಸದರಿ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುವಂತಿಲ್ಲ. ಗಣ್ಯರು ಸಂಚರಿಸುವ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಯಾವುದೇ ವಾಹನಗಳು ಸಂಚರಿಸುವಂತಿಲ್ಲ. ಸಾರ್ವಜನಿಕರು ಪೆÇಲೀಸ್ ಇಲಾಖೆಯೊಂದಿಗೆ ಸಹಕರಿಸುವುದಲ್ಲದೆ ಸಂಚಾರಿ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರುವಂತೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಕೋರಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಜನವರಿ 10 ರಂದು (ನಾಳೆ) ಮಂಗಳೂರಿನಲ್ಲಿ ಸಿಎಂ, ಡಿಸಿಎಂ ಸಹಿತ ಹಲವು ಗಣ್ಯರ ಪ್ರವಾಸ : ಪೊಲೀಸರಿಂದ ಸಾರ್ವಜನಿಕರಿಗೆ ಸಂಚಾರಿ ಸೂಚನೆಗಳು Rating: 5 Reviewed By: karavali Times
Scroll to Top