ಮಂಗಳೂರು, ಜನವರಿ 03, 2026 (ಕರಾವಳಿ ಟೈಮ್ಸ್) : ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಗಳೂರು ಪೊಲೀಸರು ಮಾರಾಟ ಮಾಡಲು ಕಾರಿನಲ್ಲಿ ದಾಸ್ತಾನಿರಿ9ಸಿದ್ದ 21 ಕೆಜಿ 450 ಗ್ರಾಂ ಗಾಂಜಾ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಗ್ರಾಮದ ಪರಮೇಶ್ವರಿ ನಗರದ 2ನೇ ಕ್ರಾಸ್ ಬೆನಕ ಎಂಬ ಮನೆಯಲ್ಲಿ ಜನವರಿ 3 ರಂದು ನಡೆದಿದೆ.
ಬಂಧಿತ ಆರೋಪಿಗಳನ್ನು ಮೂಲತಃ ಗುರುಪುರ ಉಳಾಯಿಬೆಟ್ಟು ಗ್ರಾಮದ ವಿಶ್ವನಾಥ ಮಹಾಗಣಪತಿ ದೇವಸ್ಥಾನದ ಹಿಂಬದಿಯ ಶಾಲೆ ಮಜಲು ನಿವಾಸಿ, ಪ್ರಸ್ತುತ ಸುರತ್ಕಲ್-ಚೊಕ್ಕಬೆಟ್ಟು ಪರಮೇಶ್ವರಿ ನಗರ, 2ನೇ ಕ್ರಾಸ್ ಬೆನಕ ಎಂಬ ಮನೆಯಲ್ಲಿ ಬಾಡಿಗೆಗೆ ವಾಸವಾಗಿರುವ ದಿವಂಗತ ನಾರಾಯಣ ಪೂಜಾರಿ ಅವರ ಪುತ್ರ ಪ್ರದೀಪ್ ಪೂಜಾರಿ (32) ಹಾಗೂ ಮಂಗಳೂರು ಚಿತ್ರಾಪುರ ಫಿಶರೀಸ್ ಶಾಲಾ ಹತ್ತಿರದ ನಿವಾಸಿ ಕೆ ವೆಂಕಪ್ಪ ಪೂಜಾರಿ ಎಂಬವರ ಪುತ್ರ ವಸಂತ (42) ಎಂದು ಹೆಸರಿಸಲಾಗಿದೆ.
ಬಂಧಿತ ಆರೋಪಿಗಳಿಂದ ಸುಮಾರು 10,72,500/- ರೂಪಾಯಿ ಮೌಲ್ಯದ 21 ಕೆ.ಜಿ 450 ಗ್ರಾಂ ಗಾಂಜಾ, 7 ಸಾವಿರ ರೂಪಾಯಿ ಮೌಲ್ಯದ 3 ಮೊಬೈಲ್ ಫೋನುಗಳು, ಹಾಗೂ ಗಾಂಜಾ ಸಾಗಿಸಲು ಬಳಸಿದ 3 ಲಕ್ಷ ರೂಪಾಯಿ ಮೌಲ್ಯದ ಕೆ.ಎ.04 ಎಂ.ಡಿ2532 ನೋಂದಣಿ ಸಂಖ್ಯೆಯ ಸ್ವಿಫ್ಟ್ ಕಾರು, 3 ಸಾವಿರ ರೂಪಾಯಿ ಮೌಲ್ಯದ ಗಾಂಜಾ ಸಂಗ್ರಹಿಸಿದ್ದ 3 ಲಗೇಜ್ ಬ್ಯಾಗ್, 2 ಗಾಂಜಾ ಸೇವಿಸಲು ಬಳಸುವ ಸ್ಟ್ರೀಫ್ಸ್ ಹಾಗೂ 1 ಸಾವಿರ ರೂಪಾಯಿ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. (ಅಂದಾಜು ಮೌಲ್ಯ ರೂ. 3,00,000) ಹಾಗೂ ಗಾಂಜಾ ಸಂಗ್ರಹಿಸಿದ್ದ 3 ಲಗೇಜ್ ಬ್ಯಾಗ್ (ಅಂದಾಜು ಮೌಲ್ಯ ರೂ. 3,000), ಗಾಂಜಾ ಸೇವಿಸಲು ಬಳಸುವ ಸ್ಟ್ರೀಫ್ಸ್-2, ಹಾಗೂ ನಗದು ಹಣ 1,000 ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ.
ಆರೋಪಿತರುಗಳು ಗಾಂಜಾವನ್ನು ಹೊಸ ವರ್ಷಾಚರಣೆಯ ಸಂಬಂಧ ಮಂಗಳೂರು ನಗರದಲ್ಲಿ ಮಾರಾಟ ಮಾಡಲು ಡಿ 29 ರಂದು ಒರಿಸ್ಸಾದಿಂದ ತಂದಿರುವುದಾಗಿ ತಿಳಿಸಿದ್ದು, ನಗರದಲ್ಲಿ ಹೆಚ್ಚಿನ ಪೆÇಲೀಸ್ ಬಂದೋಬಸ್ತ್ ಇದ್ದುದರಿಂದ ಮಾರಾಟ ಮಾಡಲು ಸಾಧ್ಯವಾಗದೇ ಇದ್ದು ಅದನ್ನು ಕಾರಿನಲ್ಲಿಯೇ ಇಟ್ಟಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.
ಆರೋಪಿಗಳಿಂದ ಸ್ವಾಧೀನಪಡಿಸಿಕೊಳ್ಳಲಾದ ಗಾಂಜಾ, ಕಾರು ಮತ್ತು ಇತರೆ ವಸ್ತುಗಳ ಒಟ್ಟು ಮೌಲ್ಯ 13,86,500/- ರೂಪಾಯಿಗಳಾಗಿದ್ದು, ಈ ಬಗ್ಗೆ ಸುರತ್ಕಲ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಪ್ರದೀಪ್ ಪೂಜಾರಿ ಎಂಬಾತನ ವಿರುದ್ದ ಬಜ್ಪೆ, ಬರ್ಕೆ, ಬೆಳ್ತಂಗಡಿ, ಧರ್ಮಸ್ಥಳ, ಮುಲ್ಕಿ, ಸುರತ್ಕಲ್ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣೆಗಳಲ್ಲಿ 8 ವಿವಿಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳ ಪತ್ತೆ ಕಾರ್ಯದಲ್ಲಿ ಉತ್ತರ ಉಪ ವಿಭಾಗದ ಎ.ಸಿ.ಪಿ. ಶ್ರೀಕಾಂತ ಕೆ. ಆವರು ಮತ್ತು ಅವರ ತಂಡದ ಸಿಬ್ಬಂದಿಗಳಾದ ಎಎಸ್ಸೈ ಚಂದ್ರಶೇಖರ್, ಎಚ್.ಸಿ ಗಳಾದ ರೆಜಿ ಎಂ., ದಾಮೋದರ್, ಹಾಲೇಶ್ ನಾಯ್ಕ್, ಸುನಿಲ್ ಪಡನಾಡ, ಸಂಪತ್ ಹಾಗೂ ಸುರತ್ಕಲ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್, ಪಿಎಸ್ಸೈ ರಘು ನಾಯ್ಕ್, ಸಿಬ್ಬಂದಿಗಳಾದ ಅಣ್ಣಪ್ಪ, ಅಜಿತ್ ಮ್ಯಾಥ್ಯೂ, ಅಂಜಿನಪ್ಪ ಅವರು ಪಾಲ್ಗೊಂಡಿದ್ದಾರೆ.




















0 comments:
Post a Comment