ಮಂಗಳೂರು, ಜನವರಿ 03, 2026 (ಕರಾವಳಿ ಟೈಮ್ಸ್) : ಮಂಗಳೂರು ಮಹಾನಗರ ಪಾಲಿಕೆಯ 27ನೇ ಬೋಳೂರು ವಾರ್ಡಿನಲ್ಲಿ 40 ಲಕ್ಷ ರೂಪಾಯಿ ವಿಶೇಷ ಅನುದಾನಲ್ಲಿ ಸುನೀಲ್ ಕುಮಾರ್ ರಸ್ತೆಯಿಂದ ಚಾರಂದಾಯ ದೈವಸ್ಥಾನ ಹಾಗೂ ಕುಚ್ಚಿಕಾಡು ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಹಾಗೂ ಒಳಚರಂಡಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಶಿಲಾನ್ಯಾಸ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್, ಹದಗೆಟ್ಟಿರುವ ಈ ರಸ್ತೆಯ ಅಭಿವೃದ್ಧಿ ಕಾರ್ಯವು ಶೀಘ್ರವಾಗಿ ಮುಗಿದು ಜನರ ಬಳಕೆಗೆ ಸಿಗಬೇಕೆಂಬ ಉದ್ದೇಶದಿಂದ ವಿಶೇಷ ಮುತುವರ್ಜಿ ವಹಿಸಿ ಅನುದಾನವನ್ನು ಹೊಂದಿಸಿಕೊಂಡು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಮನಪಾ ಸದಸ್ಯ ಜಗದೀಶ್ ಶೆಟ್ಟಿ, ಶಕ್ತಿಕೇಂದ್ರ ಅಧ್ಯಕ್ಷ ದಿನೇಶ್ ಕರ್ಕೇರ, ಪ್ರಮುಖರಾದ ಕಾರ್ತಿಕ್ ಬಂಗೇರ, ಪದ್ಮನಾಭ ಪುತ್ರನ್, ಸಿ ಪಿ ಚಂದ್ರಹಾಸ್, ಉಮಾ ಶಂಕರ್, ಅರುಣ್ ಮೆಂಡನ್, ಹರಿಶ್ಚಂದ್ರ, ಸುಧೀರ್ ಶೇಟ್, ಪುರಂದರ ಶೆಟ್ಟಿ, ಸುಶಿತ್ ಬೋಳೂರು, ಪ್ರಕಾಶ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.



















0 comments:
Post a Comment