14 ಪ್ರಕರಣಗಳ ಆರೋಪಿ ವಿಟ್ಲದ ಗಣೇಶ್ ಪೂಜಾರಿ ಹಾಸನ ಜಿಲ್ಲೆಗೆ ಗಡೀಪಾರು - Karavali Times 14 ಪ್ರಕರಣಗಳ ಆರೋಪಿ ವಿಟ್ಲದ ಗಣೇಶ್ ಪೂಜಾರಿ ಹಾಸನ ಜಿಲ್ಲೆಗೆ ಗಡೀಪಾರು - Karavali Times

728x90

3 January 2026

14 ಪ್ರಕರಣಗಳ ಆರೋಪಿ ವಿಟ್ಲದ ಗಣೇಶ್ ಪೂಜಾರಿ ಹಾಸನ ಜಿಲ್ಲೆಗೆ ಗಡೀಪಾರು

ಬಂಟ್ವಾಳ, ಜನವರಿ 03, 2026 (ಕರಾವಳಿ ಟೈಮ್ಸ್) : ವಿಟ್ಲ ಪೆÇಲೀಸ್ ಠಾಣಾ ವ್ಯಾಪ್ತಿಯ ಕೇಪು ಗ್ರಾಮದ ಬಡಕೋಡಿ ನಿವಾಸಿ ಗಣೇಶ ಅಲಿಯಾಸ್ ಗಣೇಶ ಪೂಜಾರಿ ಎಂಬಾತನ ಮೇಲೆ ಹಲ್ಲೆ, ದೊಂಬಿ, ಕೊಲೆ ಯತ್ನ, ಜೂಜು, ಸರಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಯಂತಹ ಒಟ್ಟು 14 ಪ್ರಕರಣಗಳು ದಾಖಲಾಗಿದೆ. ಈತನನ್ನು ವಿಟ್ಲ ಪೆÇಲೀಸ್ ಠಾಣೆಯ ಠಾಣಾಧಿಕಾರಿಗಳ ವರದಿ ಮೇರೆಗೆ ಮಂಗಳೂರು ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯಿಂದ ಹಾಸನ ಜಿಲ್ಲೆಯ ಆಲೂರು ಪೆÇಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿರುತ್ತಾರೆ. ಸಹಾಯಕ ಆಯುಕ್ತರ ಆದೇಶದಂತೆ ಆರೋಪಿಯನ್ನು ಸುರಕ್ಷಿತವಾಗಿ ಆಲೂರು ಪೆÇಲೀಸ್ ಠಾಣೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: 14 ಪ್ರಕರಣಗಳ ಆರೋಪಿ ವಿಟ್ಲದ ಗಣೇಶ್ ಪೂಜಾರಿ ಹಾಸನ ಜಿಲ್ಲೆಗೆ ಗಡೀಪಾರು Rating: 5 Reviewed By: karavali Times
Scroll to Top