ಬಂಟ್ವಾಳ, ಜನವರಿ 26, 2026 (ಕರಾವಳಿ ಟೈಮ್ಸ್) : ವ್ಯಕ್ತಿಯೋರ್ವರು ಕುಸಿದು ಬಿದ್ದು ಮೃತಪಟ್ಟ ಘಟನೆ ಚೇಳೂರು ಚರ್ಚಿನಲ್ಲಿ ಜನವರಿ 25 ರಂದು ಮಧ್ಯಾಹ್ನ ಸಂಭವಿಸಿದೆ.
ಮೃತರನ್ನು ಕುರ್ನಾಡು ಗ್ರಾಮದ ಮುಡಿಪು ನಿವಾಸಿ ಸೂಡಂಕೂರು ಸುಧೀರ್ ಕುಮಾರ್ (44) ಎಂದು ಹೆಸರಿಸಲಾಗಿದೆ. ಇವರು ಚೇಳೂರು ಚರ್ಚಿನಲ್ಲಿ ಕಂಪ್ಯೂಟರ್ ಕೆಲಸಕ್ಕೆ ಹೋದಾಗ ಮಧ್ಯಾಹ್ನ 2.30ರ ವೇಳೆಗೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಸಾಗಿಸಲಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರ ಪತ್ನಿ ಲತಾ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























0 comments:
Post a Comment