ಕೇಂದ್ರದ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಕಾರ್ಮಿಕರ ಹಕ್ಕುಗಳಿಗೆ ಹಾನಿಕಾರಕ : ರಾಮಣ್ಣ ವಿಟ್ಲ - Karavali Times ಕೇಂದ್ರದ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಕಾರ್ಮಿಕರ ಹಕ್ಕುಗಳಿಗೆ ಹಾನಿಕಾರಕ : ರಾಮಣ್ಣ ವಿಟ್ಲ - Karavali Times

728x90

12 February 2026

ಕೇಂದ್ರದ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಕಾರ್ಮಿಕರ ಹಕ್ಕುಗಳಿಗೆ ಹಾನಿಕಾರಕ : ರಾಮಣ್ಣ ವಿಟ್ಲ

ಬಂಟ್ವಾಳ, ಫೆಬ್ರವರಿ 12, 2026 (ಕರಾವಳಿ ಟೈಮ್ಸ್) : ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಕರೆ ನೀಡಿದ ಅಖಿಲ ಭಾರತ ಮುಷ್ಕರದ ಅಂಗವಾಗಿ ಎಐಸಿಸಿಟಿಯು ವತಿಯಿಂದ  ಬಿ ಸಿ ರೋಡಿನಲ್ಲಿ ಗುರುವಾರ ಪ್ರತಿಭಟನೆ ನಡೆಯಿತು. ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಮತ್ತು ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಎಐಸಿಸಿಟಿಯು ಜಿಲ್ಲಾಧ್ಯಕ್ಷ ಎ ರಾಮಣ್ಣ ವಿಟ್ಲ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ಕಾಯ್ದೆಗಳ ತಿದ್ದುಪಡಿಗಳು ಕಾರ್ಮಿಕರ ಹಕ್ಕುಗಳಿಗೆ ಹಾನಿಕಾರಕವಾಗಿದ್ದು, ಕೆಲಸದ ಭದ್ರತೆ, ಕನಿಷ್ಠ ವೇತನ ಹಾಗೂ ಸಾಮಾಜಿಕ ಭದ್ರತೆಯನ್ನು ದುರ್ಬಲಗೊಳಿಸುತ್ತವೆ ಎಂದು ಆಕ್ಷೇಪಿಸಿದರು. ಈ ತಿದ್ದುಪಡಿಗಳನ್ನು ತಕ್ಷಣ ಹಿಂಪಡೆಯಬೇಕೆಂದವರು ಆಗ್ರಹಿಸಿದರು.

ಎಐಸಿಸಿಟಿಯು ಜಿಲ್ಲಾ ಕಾರ್ಯದರ್ಶಿ ಮೋಹನ್ ಕೆ ಇ ಮಾತನಾಡಿ, ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಪಾಲಿಗೆ ಮರಣ ಶಾಸನವಾಗಿದೆ ಎಂದು ಆರೋಪಿಸಿದರು. ಕಾರ್ಮಿಕ ಮುಖಂಡ ಅನ್ಸಾರ್ ಬಜಾಲ್, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಶಾಹುಲ್ ಹಮೀದ್ ಮಾತನಾಡಿದರು.

ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿದರು.

ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಜಯಶ್ರೀ ಆರ್ ಕೆ, ಕಾರ್ಮಿಕ ಮುಖಂಡರಾದ ಸಂಜೀವ ಬೆಳ್ತಂಗಡಿ, ಪ್ರಗತಿಪರ ಮಹಿಳಾ ಸಂಘಟನೆಯ ಅಧ್ಯಕ್ಷೆ ಸುಧಾ ರಾವ್, ಕಾರ್ಯದರ್ಶಿ ಕುಸುಮ, ಎ ಐ ಕೆ ಎಂ ಅಧ್ಯಕ್ಷ ಮಹಾವೀರ್ ಜೈನ್, ಕಾರ್ಯದರ್ಶಿ ಅಚ್ಯುತ ಕಟ್ಟೆ, ಐಪಿಸಿಎಲ್ ಇದರ ಮಾರ್ಟಿನ್ ಅನಿಲ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಕೇಂದ್ರದ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಕಾರ್ಮಿಕರ ಹಕ್ಕುಗಳಿಗೆ ಹಾನಿಕಾರಕ : ರಾಮಣ್ಣ ವಿಟ್ಲ Rating: 5 Reviewed By: karavali Times
Scroll to Top