ಸಂಗಬೆಟ್ಟು ರುದ್ರಭೂಮಿಯಲ್ಲಿ ಮೂರ್ತಿಗಳನ್ನು ಉದ್ಘಾಟಿಸಿದ ಶಾಸಕ ರಾಜೇಶ್ ನಾಯಕ್ - Karavali Times ಸಂಗಬೆಟ್ಟು ರುದ್ರಭೂಮಿಯಲ್ಲಿ ಮೂರ್ತಿಗಳನ್ನು ಉದ್ಘಾಟಿಸಿದ ಶಾಸಕ ರಾಜೇಶ್ ನಾಯಕ್ - Karavali Times

728x90

11 February 2026

ಸಂಗಬೆಟ್ಟು ರುದ್ರಭೂಮಿಯಲ್ಲಿ ಮೂರ್ತಿಗಳನ್ನು ಉದ್ಘಾಟಿಸಿದ ಶಾಸಕ ರಾಜೇಶ್ ನಾಯಕ್

ಬಂಟ್ವಾಳ, ಫೆಬ್ರವರಿ 11, 2026 (ಕರಾವಳಿ ಟೈಮ್ಸ್) : ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದೂ ರುದ್ರ ಭೂಮಿಯಲ್ಲಿ ಪಂಚಾಯತ್ 15ನೇ ಹಣಕಾಸು ನಿಧಿಯಲ್ಲಿ ನಿರ್ಮಾಣಗೊಂಡಿರುವ ಲಯಕರ್ತ, ಸ್ಮಶಾನ ವಾಸಿ ರುದ್ರ ಶಿವ ಹಾಗೂ ಸತ್ಯ ಹರಿಶ್ಚಂದ್ರ ಮೂರ್ತಿಯ ಮತ್ತು ನೂತನ ಕೊಠಡಿಯ ಉದ್ಘಾಟನೆ ಹಾಗೂ ಎಪಿಎಂಸಿ ಮತ್ತು ಪಂಚಾಯತ್ ನಿಧಿಯಲ್ಲಿ ಸಿದ್ಧಕಟ್ಟೆ ಮಾರುಕಟ್ಟೆಯಲ್ಲಿ ಸ್ಥಾಪನೆಗೊಂಡಿರುವ ನೂತನ ಸುಸಜ್ಜಿತ ಮೀನು ಮಾರುಕಟ್ಟೆಯನ್ನು ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರು ಫೆ 11 ರಂದು ಉದ್ಘಾಟಿಸಿದರು.

ಈ ಸಂಧರ್ಭ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರಾಜೀವಿ, ಉಪಾಧ್ಯಕ್ಷ ಸುರೇಶ್ ಕುಲಾಲ್, ಸದಸ್ಯರುಗಳಾದ  ಸತೀಶ್ ಪೂಜಾರಿ, ಸಂದೇಶ ಶೆಟ್ಟಿ, ಉದಯ ಪೂಜಾರಿ, ಸುನಿಲ್ ಶೆಟ್ಟಿಗಾರ್, ದೇವಪ್ಪ ಕರ್ಕೇರ, ದಾಮೋದರ ಪೂಜಾರಿ, ಶ್ರೀಮತಿ ಬೆನಡಿಕ್ಟ ಡಿಕೋಸ್ತ, ಶ್ರೀಮತಿ ಶಕುಂತಲಾ, ಶ್ರೀಮತಿ ಶಾಂತ, ಶ್ರೀಮತಿ ವಿಮಲಾ ಮೋಹನ್, ಶ್ರೀಮತಿ ಪ್ರೇಮ, ಶ್ರೀಮತಿ ವಿದ್ಯಾ, ಶ್ರೀಮತಿ ಹೇಮಲತಾ, ತಾಲೂಕು ಪಂಚಾಯತ್ ಮಾಜಿ ಸದಸ್ಯ ರತ್ನ ಕುಮಾರ್ ಚೌಟ, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಸಿಎ ಬ್ಯಾಂಕ್ ನಿರ್ದೇಶಕರಾದ ವಿಶ್ವನಾಥ್ ಶೆಟ್ಟಿಗಾರ್, ಶಿವ ಗೌಡ, ವೃತ್ತಿಪರ ನಿರ್ದೇಶಕ ನವೀನ್ ಹೆಗ್ಡೆ, ಪ್ರಮುಖರಾದ ದೀಪಕ್ ಶೆಟ್ಟಿಗಾರ್, ಉದಯ ಶೆಟ್ಟಿಗಾರ್, ಪ್ರವೀಣ್ ಹೆಗ್ಡೆ, ಪಂಚಾಯತ್ ಪಿಡಿಒ ಶ್ರೀಮತಿ ಪದ್ಮಾ, ಕಾರ್ಯದರ್ಶಿ ಶ್ರೀಮತಿ ರೋಹಿಣಿ, ಪಂಚಾಯತ್ ಸಿಬ್ಬಂದಿ ಮತ್ತು ಎನ್ ಆರ್ ಎಲ್ ಎಂ ಸದಸ್ಯರುಗಳು ಉಪಸ್ಥಿತರಿದ್ದರು. ಪ್ರಜ್ವಲ್ ಎ ಸಿದ್ಧಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಸಂಗಬೆಟ್ಟು ರುದ್ರಭೂಮಿಯಲ್ಲಿ ಮೂರ್ತಿಗಳನ್ನು ಉದ್ಘಾಟಿಸಿದ ಶಾಸಕ ರಾಜೇಶ್ ನಾಯಕ್ Rating: 5 Reviewed By: karavali Times
Scroll to Top