ಮಂಗಳೂರು ಸೈಬರ್ ಪೊಲೀಸರ ಕಾರ್ಯಾಚರಣೆ : ಹೈದರಾಬಾದಿನಲ್ಲಿ ಕುಳಿತು ಕಾರ್ಯ ನಿರ್ವಹಿಸುತ್ತಿದ್ದ 6 ಮಂದಿ ಖದೀಮರ ದಸ್ತಗಿರಿ - Karavali Times ಮಂಗಳೂರು ಸೈಬರ್ ಪೊಲೀಸರ ಕಾರ್ಯಾಚರಣೆ : ಹೈದರಾಬಾದಿನಲ್ಲಿ ಕುಳಿತು ಕಾರ್ಯ ನಿರ್ವಹಿಸುತ್ತಿದ್ದ 6 ಮಂದಿ ಖದೀಮರ ದಸ್ತಗಿರಿ - Karavali Times

728x90

27 February 2026

ಮಂಗಳೂರು ಸೈಬರ್ ಪೊಲೀಸರ ಕಾರ್ಯಾಚರಣೆ : ಹೈದರಾಬಾದಿನಲ್ಲಿ ಕುಳಿತು ಕಾರ್ಯ ನಿರ್ವಹಿಸುತ್ತಿದ್ದ 6 ಮಂದಿ ಖದೀಮರ ದಸ್ತಗಿರಿ

 ಮಂಗಳೂರು, ಫೆಬ್ರವರಿ 27, 2026 (ಕರಾವಳಿ ಟೈಮ್ಸ್) : ಮಂಗಳೂರು ಸೈಬರ್ ಅಪರಾಧ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸೈಬರ್ ವಂಚನೆ ಪ್ರಕರಣ ಬೇಧಿಸಿರುವ ಮಂಗಳೂರು ಸೈಬರ್ ಠಾಣಾ ಪೊಲೀಸರು ಹೈದರಾಬಾದಿನಲ್ಲಿ ಕುಳಿತು ಸೈಬರ್ ವಂಚನೆ ಜಾಲದಲ್ಲಿ ಕಾರ್ಯಾಚರಿಸುತ್ತಿದ್ದ ಆರು ಮಂದಿ ಖದೀಮರನ್ನು  ಬಂಧಿಸುವಲ್ಲಿ ಸಫಲರಾಗಿದ್ದಾರೆ. 

ಬಂಧಿತ ಆರೋಪಿಗಳನ್ನು ಆಂಧ್ರಪ್ರದೇಶದ ನೆಲ್ಲೂರು ನಿವಾಸಿಗಳಾದ ದಿವಂಗತ ಶೇಖ್ ಮಹಮ್ಮದಾಲಿ ಅಲಿಯಾಸ್ ರಹೀಮ್ ಎಂಬವರ ಪುತ್ರ ಶೇಖ್ ಕರೀಮುಲ್ಲಾ ಅಲಿಯಾಸ್ ರಸೂಲ್ (27), ಯು ವಿ ಸತ್ಯನಾರಾಯಣ ಅವರ ಪುತ್ರ ಉತ್ಪಲ ಸಂತೋಷ್ ಕೃಷ್ಣ (36), ಕರ್ನೂಲ್ ನಿವಾಸಿ ಬುಡಿದಿನ್ನೆ ಓಬುಲೇಶು ಎಂಬವರ ಪುತ್ರ ಬುಡಿದೆನ್ನಿ ವಂಶಿ ಅಲಿಯಾಸ್ ಗುರು (21), ತೆಲಂಗಾಣ ನಿವಾಸಿಗಳಾದ ಪಂಡಿತಿ ನಾಗಯ್ಯ ಅವರ ಪುತ್ರ ಪಂಡಿತಿ ಕ್ರಾಂತಿ ಕುಮಾರ್ (36), ನರಸಯ್ಯ ಎಂಬವರ ಪುತ್ರ ಬಡೆ ಶ್ರೀನಿವಾಸ್ (38), ಮಂಗಳೂರು-ಮುಲ್ಕಿ ನಿವಾಸಿ ಅಬ್ದುಲ್ ರಜಾಕ್ ಅವರ ಪುತ್ರ ಇಬ್ರಾಹಿಂ (35) ಎಂದು ಹೆಸರಿಸಲಾಗಿದೆ. 

ಬಂಧಿತ ಆರೋಪಿಗಳಿಂದ 18 ಮೊಬೈಲ್ ಫೆÇೀನ್, 1 ಲ್ಯಾಪ್ ಟಾಪ್, 12 ಸಿಮ್ ಕಾರ್ಡ್, 15 ಚೆಕ್ ಬುಕ್, 12 ಬ್ಯಾಂಕ್ ಪಾಸ್ ಬುಕ್, 18 ಡೆಬಿಟ್ ಕಾರ್ಡ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಈ ಪ್ರಕರಣದ ದೂರುದಾರರು, ಮಂಗಳೂರು ನಗರದ ಬಂದರು ನಿವಾಸಿ ಮೊಹಮ್ಮದ್ ಇಕ್ಬಾಲ್ ಎಂಬವರ ಸ್ನೇಹಿತ ಇಬ್ರಾಹಿಂ ಎಂಬಾತನು ದೂರುದಾರರ ಕರೆಂಟ್ ಖಾತೆಯನ್ನು ವ್ಯವಹಾರದ ಉದ್ದೇಶಕ್ಕಾಗಿ ನೀಡುವಂತೆ ಕೇಳಿಕೊಂಡಿದ್ದು, ದೂರುದಾರರು ಅದಕ್ಕೆ ಒಪ್ಪಿ ತಮ್ಮ ಬ್ಯಾಂಕ್ ಖಾತೆಯ ಪಾಸ್ ಬುಕ್, ಎ.ಟಿ.ಎಂ ಕಾರ್ಡ್, ಚೆಕ್ ಬುಕ್ ಹಾಗೂ ಖಾತೆಗೆ ಲಿಂಕ್ ಆಗಿದ್ದ ಏರ್ ಟೆಲ್ ಕಂಪೆನಿಯ ಸಿಮ್ ಕಾರ್ಡನ್ನು ಇಬ್ರಾಹಿಂಗೆ ನೀಡಿದ್ದರು. ಸದ್ರಿ ಖಾತೆಯನ್ನು ಸೈಬರ್ ವಂಚಕರು ದುರುಪಯೋಗಪಡಿಸಿಕೊಂಡ ಬಗ್ಗೆ ಮಂಗಳೂರು ಸೈಬರ್ ಅಪರಾಧ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಪ್ರಕರಣದಲ್ಲಿ ತನಿಖೆ ಕೈಗೊಂಡು, ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ಪೊಲೀಸರು ಪರಿಶೀಲನೆ ನಡೆಸಿದಾಗ, ಸದ್ರಿ ಬ್ಯಾಂಕ್ ಖಾತೆ ದುರುಪಯೋಗಪಡಿಸಿಕೊಂಡ ಸೈಬರ್ ವಂಚನಾ ತಂಡವು ಹೈದರಾಬಾದಿನಲ್ಲಿ ಕಾರ್ಯಾಚರಿಸುತ್ತಿರುವುದು ಕಂಡುಬಂದಿದೆ. ಮಂಗಳೂರು ಸೈಬರ್ ಅಪರಾಧ ಪೆÇಲೀಸ್ ಠಾಣೆಯ ಪೆÇಲೀಸ್ ಅಧಿಕಾರಿಗಳ ತಂಡವು ಹೈದರಾಬಾದಿಗೆ ತೆರಳಿ ಸೈಬರ್ ವಂಚನಾ ತಂಡವನ್ನು ಪತ್ತೆ ಮಾಡಿ, 5 ಜನ ಆರೋಪಿತರನ್ನು ಹೈದರಾಬಾದಿನಲ್ಲಿ ಹಾಗೂ ಒರ್ವ ಆರೋಪಿಯನ್ನು ಮಂಗಳೂರಿನಲ್ಲಿ ದಸ್ತಗಿರಿ ಮಾಡಿದ್ದಾರೆ. 

ಆರೋಪಿಗಳು ಸಾಮಾಜಿಕ ಮಾಧ್ಯಮಗಳ ಮುಖಾಂತರ ಬ್ಯಾಂಕ್ ಖಾತೆದಾರರಿಗೆ  ಶೇಕಡ 4 ರಿಂದ 6 ರಷ್ಟು ಕಮೀಷನ್ ನೀಡುವುದಾಗಿ ಅಕರ್ಷಕ ಜಾಹೀರಾತುಗಳನ್ನು ನೀಡಿ, ಇದರಿಂದ ದುರಾಸೆಗೊಳಗಾದ  ವ್ಯಕ್ತಿಗಳಿಂದ ಬ್ಯಾಂಕ್ ಖಾತೆಗಳ ಸಂಪೂರ್ಣ ವಿವರಗಳನ್ನು ಮತ್ತು ಓಟಿಪಿಯನ್ನು ಪಡೆದುಕೊಂಡು ವಿದೇಶದಲ್ಲಿರುವ ಸೈಬರ್ ವಂಚಕರಿಗೆ ರವಾನಿಸಿ, ವಂಚನೆ ನಡೆಸುತ್ತಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. 

ವಂಚಕರು ಉಪಯೋಗಿಸಿದ ಖಾತೆಗಳ ಹಾಗೂ ಸದ್ರಿ ಖಾತೆಗಳ ಮೇಲೆ ದಾಖಲಾದ ಪ್ರಕರಣಗಳ ವಿವರ

ಮಂಗಳೂರು ಸೈಬರ್ ಅಪರಾಧ ಪೆÇಲೀಸ್ ಠಾಣೆಯಲ್ಲಿ ದಾಖಲಾದ ಸದ್ರಿ ಪ್ರಕರಣದ ಒಂದು ಬ್ಯಾಂಕ್ ಖಾತೆಯ ಮೇಲೆ ಎನ್ ಸಿ ಆರ್ ಪಿ ಪೋರ್ಟಲಿನಲ್ಲಿ ದೇಶದದ್ಯಾಂತ ಸುಮಾರು 5 ದೂರುಗಳು ದಾಖಲಾಗಿರುತ್ತವೆ. 

ಆರೋಪಿತರಿಂದ ಸ್ವಾಧೀನಪಡಿಸಿದ ಮೊಬೈಲ್ ಫೆÇೀನ್ ಹಾಗೂ ಲ್ಯಾಪ್ ಟಾಪ್ ಗಳನ್ನು  ಪರಿಶೀಲನೆ ನಡೆಸಿದಾಗ, ಒಟ್ಟು 72 ಖಾತೆಗಳ ವಿವರಗಳು ಕಂಡುಬಂದಿದ್ದು, ಅದರಲ್ಲಿ 30 ಬ್ಯಾಂಕ್ ಖಾತೆಗಳ ಮೇಲೆ ಎನ್ ಸಿ ಆರ್ ಪಿ ಪೋರ್ಟಲಿನಲ್ಲಿ ಒಟ್ಟು 272 ಕ್ಕೂ ಹೆಚ್ಚು ದೂರುಗಳು ದಾಖಲಾಗಿರುವುದು ಕಂಡುಬಂದಿದೆ. ಸದ್ರಿ ಸೈಬರ್ ವಂಚನಾ ತಂಡವು ಫೆ 26 ರಂದು ಒಂದೇ ದಿನ 2 ಕೋಟಿಗೂ ಹೆಚ್ಚಿನ ಹಣಕಾಸು ವಹಿವಾಟು ನಡೆಸಿರುವುದು ತನಿಖೆ ವೇಳೆ ಕಂಡು ಬಂದಿದೆ. ಸೈಬರ್ ವಂಚಕರು ವಂಚನೆಗೆ ಬಳಕೆ ಮಾಡಿರುವ ಬ್ಯಾಂಕ್ ಖಾತೆಗಳ  ಮೇಲೆ  ದಾಖಲಾಗಿರುವ  ಪ್ರಕರಣಗಳು ಹಾಗೂ  ಹಣಕಾಸು ವಹಿವಾಟಿನ ಬಗ್ಗೆ ಪೊಲೀಸರು ಹೆಚ್ಚಿನ ಪರಿಶೀಲನೆ ನಡೆಸುತ್ತಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಸೈಬರ್ ಪೊಲೀಸರ ಕಾರ್ಯಾಚರಣೆ : ಹೈದರಾಬಾದಿನಲ್ಲಿ ಕುಳಿತು ಕಾರ್ಯ ನಿರ್ವಹಿಸುತ್ತಿದ್ದ 6 ಮಂದಿ ಖದೀಮರ ದಸ್ತಗಿರಿ Rating: 5 Reviewed By: karavali Times
Scroll to Top