ಪುತ್ತೂರು, ಫೆಬ್ರವರಿ 01, 2026 (ಕರಾವಳಿ ಟೈಮ್ಸ್) : ಕಾರೊಂದು ರಸ್ತೆ ಬದಿಯ ಕಾಂಕ್ರಿಟ್ ತಡೆಗೋಡೆಗೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟುಹೋದ ಘಟನೆ ಬಜತ್ತೂರು ಗ್ರಾಮದ ನೀರಕಟ್ಟೆ ಬಳಿ ಜನವರಿ 30 ರಂದು ಸಂಭವಿಸಿದೆ.
ಜನವರಿ 30 ರಂದು ಮಧ್ಯಾಹ್ನ 1.30 ರ ವೇಳೆಗೆ ಕೆಎ05 ಎನ್ ಎನ್ 8222 ನೋಂದಣಿ ಸಂಖ್ಯೆಯ ಕಾರಿನ ಚಾಲಕ, ಬೆಂಗಳೂರು-ರಾಜಾಜಿ ನಗರ ನಿವಾಸಿ ಹರ್ಷಿತ್ ಜಿ (29) ಅವರು ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ನೀರಕಟ್ಟೆ ಬಳಿ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ ಪರಿಣಾಮ ಕಾರು ರಸ್ತೆ ಬದಿ ಕಾಂಕ್ರೀಟ್ ತಡೆಗೋಡೆಗೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಹೋಗಿದ್ದು ಕಾರಿನಲ್ಲಿ ಪ್ರಯಾಣಿಸಿದ್ದವರಿಗೆ ಯಾವುದೇ ಗಾಯಗಳಿಲ್ಲ. ಈ ಬಗ್ಗೆ ಪುತ್ತೂರು ಸಂಚಾರಿ ಠಾಣಾ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ.















0 comments:
Post a Comment