ನೆಟ್ಲಮುಡ್ನೂರು : ಮನೆಗೆ ತೆರಳುತ್ತಿದ್ದ ವ್ಯಕ್ತಿಗೆ ಐವರ ತಂಡದಿಂದ ಹಲ್ಲೆ - Karavali Times ನೆಟ್ಲಮುಡ್ನೂರು : ಮನೆಗೆ ತೆರಳುತ್ತಿದ್ದ ವ್ಯಕ್ತಿಗೆ ಐವರ ತಂಡದಿಂದ ಹಲ್ಲೆ - Karavali Times

728x90

15 February 2026

ನೆಟ್ಲಮುಡ್ನೂರು : ಮನೆಗೆ ತೆರಳುತ್ತಿದ್ದ ವ್ಯಕ್ತಿಗೆ ಐವರ ತಂಡದಿಂದ ಹಲ್ಲೆ

ಬಂಟ್ವಾಳ, ಫೆಬ್ರವರಿ 15, 2026 (ಕರಾವಳಿ ಟೈಮ್ಸ್) : ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರಿಗೆ ತಂಡವೊಂದು ಮಾರಕಾಯುಧಗಳಿಂದ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ ಘಟನೆ ನೆಟ್ಲಮುಡ್ನೂರು ಗ್ರಾಮದಲ್ಲಿ ಫೆಬ್ರವರಿ 13 ರಂದು ನಡೆದಿದೆ. 

ಹಲ್ಲೆಯಿಂದ ಗಾಯಗೊಂಡ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಮನ್ಸೂರ್ ಹೈನುದ್ ಸಾಹೇಬ್ ಎಂದು ಹೆಸರಿಸಲಾಗಿದೆ. ಇವರು ಫೆ 13 ರಂದು ರಾತ್ರಿ ಮನೆಗೆ ಬರುವಾಗ ಮನೆಯ ಮುಂದಿನ ಪಾರ್ಕಿಂಗ್ ರಸ್ತೆಯಿಂದ ಪರಿಚಯದ ಉಮ್ಮರ್ ಫಾರೂಕ್ ಮತ್ತು ಇತರ ಇಬ್ಬರು ಕೈಯಲ್ಲಿ ತಲ್ವಾರ್ ಮತ್ತು ರಾಡ್ ಹಿಡಿದುಕೊಂಡು ಬಂದು ಅವ್ಯಾಚವಾಗಿ ಬೈದು ನಿನ್ನನ್ನು ಈ ದಿನ ಕೊಲ್ಲದೇ ಬಿಡುವುದಿಲ್ಲ ಎಂದು ಹೇಳಿ ಉಮ್ಮರ್ ಪಾರೂಕ್ ಕೈಯಲ್ಲಿರುವ ತಲ್ವಾರಿನಿಂದ ಹಲ್ಲೆ ನಡೆಸಿರುತ್ತಾನೆ. ಹಲ್ಲೆಯಿಂದ ಮನ್ಸೂರ್ ಅವರ ಎಡ ಕಣ್ಣಿನ ಹುಬ್ಬಿಗೆ ತಾಗಿ ಗಾಯವಾಗಿರುತ್ತದೆ. ಈ ಸಂದರ್ಭ ಮನ್ಸೂರ್ ಅವರು ಆರೋಪಿತರಿಂದ ತಪ್ಪಿಸಿಕೊಳ್ಳಲು ಮಾಣಿ-ಪುತ್ತೂರು ಮುಖ್ಯ ರಸ್ತೆ ಕಡೆಗೆ ಓಡುತ್ತಿರುವಾಗ ಮುಂದಿನಿಂದ ಇನ್ನಿಬ್ಬರು ಅಪರಿಚಿತರು ಕೈಯಲ್ಲಿ ಕಟ್ಟಿಗೆ ದೊಣ್ಣೆ ಹಿಡಿದುಕೊಂಡು ಅಡ್ಡಗಟ್ಟಿ ಹಿಂದಿನಿಂದ ಒಬ್ಬಾತ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದಿದ್ದಾನೆ. ಈ ವೇಳೆ ಮನ್ಸೂರ್ ಅವರು ನೆಲಕ್ಕೆ ಬಿದ್ದಿದ್ದು, ನಂತರ 5 ಜನ ಆರೋಪಿಗಳು ಸೇರಿ ಕಬ್ಬಿಣದ ರಾಡ್ ಮತ್ತು ಕಟ್ಟಿಗೆ ದೊಣ್ಣೆ ಮತ್ತು ಕೈಗಳಿಂದ ಹಲ್ಲೆ ಮಾಡಿದ್ದಾರೆ. ಈ ಸಂದರ್ಭ ಅವರು ಬೊಬ್ಬೆ ಹಾಕಿದ್ದು ಶಬ್ದ ಕೇಳಿ ಅವರ ಹೆಂಡತಿ ಮತ್ತು ರಸ್ತೆಯಲ್ಲಿ ಹೋಗುತ್ತಿದ್ದ ಇಬ್ಬರು ಸ್ಥಳಕ್ಕೆ ಬರುವುದನ್ನು ದಿದ್ದು ಅವರನ್ನು ನೋಡಿದ ಆರೋಪಿಗಳು ಸ್ಥಳದಿಂದ ಓಡಿ ಹೋಗಿರುತ್ತಾರೆ. ಗಾಯಗೊಂಡ ಮನ್ಸೂರ್ ಅವರನ್ನು ಕಾರೊಂದರಲ್ಲಿ ಪುತ್ತೂರು ಪ್ರಗತಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ನೆಟ್ಲಮುಡ್ನೂರು : ಮನೆಗೆ ತೆರಳುತ್ತಿದ್ದ ವ್ಯಕ್ತಿಗೆ ಐವರ ತಂಡದಿಂದ ಹಲ್ಲೆ Rating: 5 Reviewed By: karavali Times
Scroll to Top