ಫೆಬ್ರವರಿ 15 ರಿಂದ 4 ತಿಂಗಳ ಕಾಲ ಪಂಪ್ ವೆಲ್ ಸರ್ಕಲ್-ಕರಾವಳಿ ಜಂಕ್ಷನ್ ರಸ್ತೆ ಅಭಿವೃದ್ದಿ ಕಾಮಗಾರಿ : ಪೊಲೀಸರಿಂದ ಸಂಚಾರ ಸೂಚನೆಗಳು - Karavali Times ಫೆಬ್ರವರಿ 15 ರಿಂದ 4 ತಿಂಗಳ ಕಾಲ ಪಂಪ್ ವೆಲ್ ಸರ್ಕಲ್-ಕರಾವಳಿ ಜಂಕ್ಷನ್ ರಸ್ತೆ ಅಭಿವೃದ್ದಿ ಕಾಮಗಾರಿ : ಪೊಲೀಸರಿಂದ ಸಂಚಾರ ಸೂಚನೆಗಳು - Karavali Times

728x90

14 February 2026

ಫೆಬ್ರವರಿ 15 ರಿಂದ 4 ತಿಂಗಳ ಕಾಲ ಪಂಪ್ ವೆಲ್ ಸರ್ಕಲ್-ಕರಾವಳಿ ಜಂಕ್ಷನ್ ರಸ್ತೆ ಅಭಿವೃದ್ದಿ ಕಾಮಗಾರಿ : ಪೊಲೀಸರಿಂದ ಸಂಚಾರ ಸೂಚನೆಗಳು

ಮಂಗಳೂರು, ಫೆಬ್ರವರಿ 14, 2026 (ಕರಾವಳಿ ಟೈಮ್ಸ್) : ಮಂಗಳೂರು ನಗರದ ಪಂಪ್ ವೆಲ್ ಸರ್ಕಲಿನಿಂದ ಕರಾವಳಿ ಜಂಕ್ಷನ್ ವರೆಗಿನ ಚತುಷ್ಪಥ ರಸ್ತೆಯ ಅಭಿವೃದ್ದಿ ಕಾಮಗಾರಿಗಳು ಲೋಕೋಪಯೋಗಿ ಇಲಾಖೆ ವತಿಯಿಂದ ಫೆಬ್ರವರಿ 15 ರಿಂದ ಜೂನ್ 15ರವರೆಗೆ 4 ತಿಂಗಳುಗಳ ಕಾಲ ನಡೆಯಲಿದೆ. 

ಮೇಲ್ಕಂಡ ಅಭಿವೃದ್ದಿ ಕಾಮಗಾರಿಗಳು ನಡೆಯುವ ಅವಧಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಪಂಪ್ ವೆಲ್ ವೃತ್ತದಿಂದ ಕಂಕನಾಡಿ ಹಳೇ ರಸ್ತೆ-ಕಂಕನಾಡಿ ಜಂಕ್ಷನ್ನಿಗೆ (ಮಂಗಳೂರು ನಗರಕ್ಕೆ ಒಳಬರುವ ರಸ್ತೆ) ಮತ್ತು ಕರಾವಳಿ ಜಂಕ್ಷನ್ನಿನಿಂದ ಪಂಪುವೆಲ್ ವೃತ್ತದವರೆಗಿನ (ಮಂಗಳೂರು ನಗರದಿಂದ ಹೊರ ಹೋಗುವ ರಸ್ತೆ) ಬೈಪಾಸ್ ರಸ್ತೆಗಳನ್ನು ತಾತ್ಕಾಲಿಕವಾಗಿ ಏಕಮುಖ ರಸ್ತೆಗಳನ್ನಾಗಿ ಮಾರ್ಪಾಡು ಮಾಡಲಾಗಿದ್ದು, ಸದ್ರಿ ರಸ್ತೆಯಲ್ಲಿ ವಾಹನ ದಟ್ಟನೆ ಉಂಟಾಗಲಿದ್ದು, ಸಾರ್ವಜನಿಕರು ಈ ಕೆಳಗಿನ ರಸ್ತೆಯನ್ನು ಉಪಯೋಗಿಸಬಹುದಾಗಿದೆ.  

ಪಂಪ್ ವೆಲ್ ಜಂಕ್ಷನ್ನಿನಿಂದ ಕರಾವಳಿ ಜಂಕ್ಷನ್ನಿಗೆ ಹೋಗುವ ವಾಹನಗಳನ್ನು ನಿರ್ಬಂಧಿಸಿ, ಕಂಕನಾಡಿ ಹಳೆ ರಸ್ತೆ ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಗಿದೆ. 

ತಲಪಾಡಿ, ತೊಕ್ಕೊಟ್ಟು ಕಡೆಯಿಂದ ಮಂಗಳೂರು ನಗರಕ್ಕೆ ಪ್ರವೇಶಿಸುವ ಎಲ್ಲಾ ವಾಹನಗಳು ಪರ್ಯಾಯ ರಸ್ತೆಯಾದ ಮಹಾಕಾಳಿಪಡ್ಪು, ಮಾರ್ಗನ್ಸ್ ಗೇಟ್, ಕೋಟಿಚೆನ್ನಯ ಸರ್ಕಲ್ ಅಥವಾ ಮಂಗಳಾದೇವಿ ಮುಖಾಂತರ ಸಂಚರಿಸುವುದು.

ಬಿ.ಸಿ.ರೋಡು ಕಡೆಯಿಂದ ಬರುವಂತಹ ಭಾರಿ ವಾಹನಗಳು, ಇತರೆ ವಾಹನಗಳು ಮತ್ತು ಲಾಲ್ ಬಾಗ್ ಬಸ್ಸು ನಿಲ್ದಾಣಕ್ಕೆ ತೆರಳುವ ಕೆ ಎಸ್ ಆರ್ ಟಿ ಸಿ ಬಸ್ಸುಗಳು ಪಡೀಲ್ ಜಂಕ್ಷನ್ನಿನಿಂದ ನಂತೂರು ಕಡೆಗೆ ಹಾಗೂ ಕೇರಳ-ಕಾಸರಗೋಡು ಕಡೆಯಿಂದ ಕರಾವಳಿ ಕಡೆಗೆ ಬರುವ ಭಾರಿ ವಾಹನಗಳು ಮತ್ತು ಕೆ ಎಸ್ ಆರ್ ಟಿ ಸಿ  ಬಸ್ಸುಗಳು ಪಂಪ್ ವೆಲ್ ಜಂಕ್ಷನ್ನಿನಿಂದ ನಂತೂರು ಕಡೆಗೆ ಸಂಚರಿಸುವುದು. 

ಲಾಲ್ ಬಾಗ್ ಕೆ.ಎಸ್.ಅರ್.ಟಿ.ಸಿ ಬಸ್ಸು ನಿಲ್ದಾಣಕ್ಕೆ ಹೋಗುವ ಬಸ್ಸುಗಳು ಪಡೀಲ್-ನಂತೂರು-ಶಿವಭಾಗ್-ಬಲ್ಮಠ-ಅಂಬೇಡ್ಕರ್ ವೃತ್ತ-ಬಂಟ್ಸ್ ಹಾಸ್ಟೆಲ್ ಆಗಿ ಬಸ್ಸು ನಿಲ್ಡಾಣಕ್ಕೆ ಸಂಚರಿಸಬಹುದಾಗಿದೆ.

ಮಂಗಳೂರು ನಗರದ ಒಳಭಾಗದಿಂದ ಕರಾವಳಿ ಜಂಕ್ಷನ್ ಕಡೆಯಿಂದ ಪಂಪುವೆಲ್ ಕಡೆಗೆ ಸಂಚರಿಸುವ ವಾಹನಗಳು ಯಥವಾತ್ತಾಗಿ ಸಂಚರಿಸುವುದು. 

ಕಂಕನಾಡಿ ಜಂಕ್ಷನ್-ಪಂಪುವೆಲ್ ರಸ್ತೆ (ಕಂಕನಾಡಿ ಓಲ್ಡ್ ರಸ್ತೆ), ಕರಾವಳಿ-ಕಂಕನಾಡಿ ರಸ್ತೆ, ಕಂಕನಾಡಿ-ಫಳ್ನೀರ್ ಹೈಲ್ಯಾಂಡ್ ಆಸ್ಪತ್ರೆ ರಸ್ತೆ, ಕರಾವಳಿ-ಬಲ್ಮಠ ರಸ್ತೆ ಹಾಗೂ ಕಂಕನಾಡಿ ಬೈಪಾಸ್ ರಸ್ತೆಯ ಎರಡೂ ಕಡೆಗಳಲ್ಲಿ ವಾಹನ ನಿಲುಗಡೆ ಮಾಡುವಂತಿಲ್ಲ.

ಸದರಿ ಕಾಮಗಾರಿ ಮತ್ತು ಮಾರ್ಗ ಬದಲಾವಣೆ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾದ್ಯತೆಗಳು ಇರುವುದರಿಂದ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ವಿನಂತಿಸಿದ್ದಾರೆ.

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಫೆಬ್ರವರಿ 15 ರಿಂದ 4 ತಿಂಗಳ ಕಾಲ ಪಂಪ್ ವೆಲ್ ಸರ್ಕಲ್-ಕರಾವಳಿ ಜಂಕ್ಷನ್ ರಸ್ತೆ ಅಭಿವೃದ್ದಿ ಕಾಮಗಾರಿ : ಪೊಲೀಸರಿಂದ ಸಂಚಾರ ಸೂಚನೆಗಳು Rating: 5 Reviewed By: karavali Times
Scroll to Top