ಅರ್ಜಿ ಸಲ್ಲಿಸಿ ವಿಲೇವಾರಿಗೆ ಬಾಕಿ ಇದ್ದ ಹೊಸ ಪಡಿತರ ಚೀಟಿ ವಿತರಣೆ ಆರಂಭ - Karavali Times ಅರ್ಜಿ ಸಲ್ಲಿಸಿ ವಿಲೇವಾರಿಗೆ ಬಾಕಿ ಇದ್ದ ಹೊಸ ಪಡಿತರ ಚೀಟಿ ವಿತರಣೆ ಆರಂಭ - Karavali Times

728x90

26 February 2026

ಅರ್ಜಿ ಸಲ್ಲಿಸಿ ವಿಲೇವಾರಿಗೆ ಬಾಕಿ ಇದ್ದ ಹೊಸ ಪಡಿತರ ಚೀಟಿ ವಿತರಣೆ ಆರಂಭ

ಮಂಗಳೂರು, ಫೆಬ್ರವರಿ 26, 2026 (ಕರಾವಳಿ ಟೈಮ್ಸ್) : ಹೊಸ ಪಡಿತರ ಚೀಟಿ ಪಡೆಯಲು ಈಗಾಗಲೇ ಅರ್ಜಿ ಸಲ್ಲಿಸಿ ವಿತರಣೆಗೆ ಬಾಕಿ ಇರುವ ಕುಟುಂಬಗಳಿಗೆ ಕಾರ್ಡ್ ವಿತರಣೆಗೆ ಸರಕಾರ ಆದೇಶ ನೀಡಿದ್ದು, ಈ ಹಿನ್ನಲೆಯಲ್ಲಿ ಅರ್ಜಿ ಸಲ್ಲಿಸಿ ಪಡಿತರ ಚೀಟಿ ವಿತರಣೆ ಆಗದ ಕುಟುಂಬಗಳು ಆಯಾ ತಾಲೂಕು ಕಚೇರಿಗಳಲ್ಲಿನ ಆಹಾರ ಶಾಖೆಗೆ ಭೇಟಿ ಹೊಸ ಪಡಿತರ ಚೀಟಿ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಕಳೆದ ಹಲವು ವರ್ಷಗಳಿಂದ ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಸರಕಾರ ಹೊಸ ಪಡಿತರ ಚೀಟಿ ವಿತರಿಸದೆ ತಡೆ ಹಿಡಿದಿತ್ತು. ಇದರಿಂದ ಹಲವು ಕುಟುಂಬಗಳು ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಿದ್ದರೂ ರೇಶನ್ ಕಾರ್ಡ್ ದೊರೆಯದೆ ತೀವ್ರ ಅನಾನುಕೂಲ ಎದುರಿಸುತ್ತಿದ್ದರು. ಈ ನಡುವೆ ಆರೋಗ್ಯ ಸಂಬಂಧಿ ಉದ್ದೇಶಗಳಿಗಾಗಿ ಮಾತ್ರ ಸರಕಾರ ನಿರ್ದಿಷ್ಟ ಸಮಯ ನಿಗದಿಪಡಿಸಿ ಹೊಸ ಬಿಪಿಎಲ್ ಪಡಿತರ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳುತ್ತಿತ್ತು. 

ಇದೀಗ ಅರ್ಜಿ ಸಲ್ಲಿಸಿದ ಗ್ರಾಹಕರ ಹೊಸ ಪಡಿತರ ಚೀಟಿ ವಿತರಣೆಗೆ ಸರಕಾರ ಆದೇಶ ನೀಡಿರುವ ಹಿನ್ನಲೆಯಲ್ಲಿ ಪಡಿತರ ಚೀಟಿ ಇಲ್ಲದೆ ಕಂಗಾಲಾಗಿದ್ದ ಕುಟುಂಬಗಳು ಸದ್ಯ ನಿಟ್ಟುಸಿರುವ ಬಿಡುವಂತಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಅರ್ಜಿ ಸಲ್ಲಿಸಿ ವಿಲೇವಾರಿಗೆ ಬಾಕಿ ಇದ್ದ ಹೊಸ ಪಡಿತರ ಚೀಟಿ ವಿತರಣೆ ಆರಂಭ Rating: 5 Reviewed By: karavali Times
Scroll to Top