ಬೆಳ್ತಂಗಡಿ, ಫೆಬ್ರವರಿ 14, 2026 (ಕರಾವಳಿ ಟೈಮ್ಸ್) : ವೇಣೂರು ಪೊಲೀಸ್ ಠಾಣೆಯಲ್ಲಿ 2012 ರಲ್ಲಿ ದಾಖಲಾದ ಪೋಕ್ಸೋ ಪ್ರಕರಣದ ಆರೋಪಿ ಕಳೆದ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕು, ನಾರಾವಿ ಗ್ರಾಮದ ನಿವಾಸಿ ಯೋಗೀಶ್ ಪೂಜಾರಿ (35) ಎಂದು ಹೆಸರಿಸಲಾಗಿದೆ. ಈತನನ್ನು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕು ನಾಗನೂರು ಗ್ರಾಮದಲ್ಲಿ ಫೆ 14 ರಂದು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.












0 comments:
Post a Comment